ಕಲಬುರಗಿ | ಸರ್ಕಾರಿ ಸೇವೆಗಳ ಜಾಗೃತಿಗಾಗಿ ಕವಲಗಾ ಗ್ರಾಮದಲ್ಲಿ ಬೀದಿ ನಾಟಕ
ಕಲಬುರಗಿ : ಸಮುದಾಯ ಆರ್ಥಿಕ ಸಾಕ್ಷರತಾ ಕೇಂದ್ರ ಆಳಂದ್ ದಾನಕಳಂಜಿ ಆಶ್ರಯದಲ್ಲಿ, ಆಳಂದ್ ತಾಲ್ಲೂಕಿನ ಕವಲಗಾ ಗ್ರಾಮದಲ್ಲಿ ಡಿಜಿಟಲ್ ಬ್ಯಾಂಕಿoಗ್, ಸುಕನ್ಯಾ ಸಮೃದ್ಧಿ, ಅಟಲ್ ಪಿಂಚಣಿ ಯೋಜನೆ, ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಕುರಿತು ಅರಿವು ಮೂಡಿಸಲು ಹೊಸಪೇಟೆಯ ರಂಗಸಖಿ ಕಲಾತಂಡದ ವತಿಯಿಂದ ಬೀದಿ ನಾಟಕ ಪ್ರದರ್ಶನ ಗ್ರಾಮೀಣ ಜನರ ಜನಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಮುದಾಯ ಆರ್ಥಿಕ ಜಿಲ್ಲಾ ಸಂಯೋಜಕಿ ಮೀನಾಕ್ಷಿ ಮಾತನಾಡಿ, ʼಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಮತ್ತು ಸರ್ಕಾರದ ಯೋಜನೆಗಳ ಪ್ರಾಮುಖ್ಯತೆಯನ್ನು ಪರಿಚಯಿಸುವುದು ಅಗತ್ಯ. ಈ ಕಾರ್ಯಕ್ರಮದ ಮೂಲಕ ಮಹಿಳೆಯರು ಹಾಗೂ ಗ್ರಾಮೀಣರು ಆರ್ಥಿಕ ಸ್ವಾವಲಂಬನೆಗಾಗಿ ಇವುಗಳನ್ನು ಬಳಸಿಕೊಳ್ಳಬೇಕುʼ ಎಂದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಸಂಯೋಜಕ ಶಶಿಧರ್, ತಾಲ್ಲೂಕು ಸಂಯೋಜಕಿ ಸಂತೋಷಿ, ಮತ್ತು ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದರು. ನಾಟಕಗಳ ಮೂಲಕ ಸಮುದಾಯದ ಮಧ್ಯೆ ಡಿಜಿಟಲ್ ಬ್ಯಾಂಕಿoಗ್ ಹಾಗೂ ಆರ್ಥಿಕ ಸಬಲೀಕರಣದ ಮಹತ್ವವನ್ನು ಸ್ಪಷ್ಟವಾಗಿ ತಲುಪಿಸುವ ಪ್ರಯತ್ನ ಮಾಡಲಾಯಿತು.
ಪ್ರದರ್ಶನದಲ್ಲಿ ಕೇಂದ್ರದ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು, ಜಾಗೃತಿಯನ್ನು ಉತ್ತೇಜಿಸಿದರು.