×
Ad

ಕಲಬುರಗಿ | ಆದಿವಾಸಿ ಸಮಾಜದ ಕುರಿತು ಸಮೀಕ್ಷೆ ನಡೆಸಿದ ವಿಜಿ ವ್ಯುಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯರು

Update: 2024-12-25 15:58 IST

ಕಲಬುರಗಿ : ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬಿ.ಎ. ಅಂತಿಮ ವರ್ಷದ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿಯರು ಆದಿವಾಸಿ ಸಮಾಜದ ಕುರಿತು ಕಮಲಾಪುರ ತಾಲ್ಲೂಕಿನ ವಿವಿಧ ತಾಂಡಾದಲ್ಲಿ ಸಮೀಕ್ಷೆ ನಡೆಸಿದರು.

ಕ್ಷೇತ್ರ ಕಾರ್ಯವನ್ನು ಹಮ್ಮಿಕೊಂಡು ತಾಂಡಾದ ಲಂಬಾಣಿ ಜನಾಂಗದವರ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಮತ್ತು ಅವರ ರಾಜಕೀಯ ಪಾಲ್ಗೋಳ್ಳುವಿಕೆ ಆರ್ಥಿಕ ಸ್ಥಿತಿಗತಿಗಳ ಕುರಿತು ಸುಮಾರು 90 ಕ್ಕೂ ಹೆಚ್ಚುಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿಯ ಮೂಲಕ ವಿದ್ಯಾರ್ಥಿನಿಯರು ನೇರವಾಗಿ ತಾಂಡಾದ ನಿವಾಸಿಗಳಿಂದ ಮಾಹಿತಿಯನ್ನು ಸಂಗ್ರಹಿಸಿದರು.

ಈ ಕ್ಷೇತ್ರ ಕಾರ್ಯದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಸಮಗ್ರ ವರದಿಯನ್ನು ತಯಾರಿಸಿ ತಾಲ್ಲೂಕು ಆಡಳಿತಕ್ಕೆ ನೀಡಲಾಗುತ್ತದೆ. ಆ ಮೂಲಕವಾಗಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದು ಇದರ ಉದ್ದೇಶಗಳಲ್ಲಿ ಒಂದು. ಈ ಕ್ಷೇತ್ರ ಕಾರ್ಯವನ್ನು ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶಕುಮಾರ ಗಂವ್ಹಾರ ಅವರ ಮಾರ್ಗದರ್ಶನದಲ್ಲಿ ನಿರ್ವಹಿಸಿದರು.

ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರೇಮಚಂದ ಚವ್ಹಾಣ, ಡಾ.ಶ್ರೀದೇವಿ ಸರಡಗಿ, ಶಿವಲೀಲಾ ಧೋತ್ರೆ, ಕವಿತಾ ಎಮ್. ಶ್ರೀ ಸಂಗಮೇಶ ಅವರು ಭಾಗವಹಿಸಿ ವಿದ್ಯಾರ್ಥಿನಿಯ ಸಮೀಕ್ಷಾ ಕಾರ್ಯಕ್ಕೆ ಬೆಂಬಲಿಸಿ ಪ್ರೋತ್ಸಾಹಿಸಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News