×
Ad

ಕಲಬುರಗಿ | ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಇರಬೇಕು : ಐ.ಕೆ.ಪಾಟೀಲ್

Update: 2024-11-16 18:08 IST

ಕಲಬುರಗಿ : ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ, ಆದರೆ ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಎಂ.ಎಸ್.ಇರಾನಿ ಕಾಲೇಜಿನ ಉಪನ್ಯಾಸಕ ಐ.ಕೆ. ಪಾಟೀಲ್ ಹೇಳಿದ್ದಾರೆ.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆ ನಿಮಿತ್ತ ಕ್ರೀಡಾ ವಿಧ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ. ಎಸ್ ಇರಾಣಿ ಪದವಿಪೂರ್ವ ಕಾಲೇಜು ರಾಜ್ಯಕ್ಕೆ, ರಾಷ್ಟ್ರಕ್ಕೆ ಹಲವಾರು ಕ್ರೀಡಾಪಟುಗಳನ್ನು ನೀಡಿದೆ. ಇಲ್ಲಿಯ ಅನೇಕ ವಿಧ್ಯಾರ್ಥಿಗಳು ಕ್ರೀಡಾ ಸಾಧಕರಾಗಿ ಹೊರ ಹೊಮ್ಮಿದ್ದಾರೆ, ರಾಜ್ಯ ರಣಜಿ ಕ್ರಿಕೆಟ್ ತಂಡದಲ್ಲಿಯೂ ಸಹ ಇಲ್ಲಿನ ಕ್ರಿಕೆಟ್ ತಾರೆ ಶಶಿಕುಮಾರ್ ಕಾಂಬ್ಳೆ ಆಟ ಆಡುತ್ತಿದ್ದಾರೆ ಎಂದರು.

ಕೇವಲ ಭೌತಿಕವಾಗಿ ಸದೃಢವಾಗಿದ್ದರೆ ಮಾತ್ರ ಸಾಧನೆ ಮಾಡಬಹುದು ಎಂಬುದು ತಪ್ಪು ಕಲ್ಪನೆ. ಮಾನಸಿಕವಾಗಿ ದೃಢ ನಿಲುವು ಹೊಂದಿದರೆ ಏನು ಬೇಕಾದರೂ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ ಮಾತನಾಡಿ, ಸಂಸ್ಕಾರಗಳು ಮನುಷ್ಯನನ್ನು ರೂಪಿಸುತ್ತವೆ. ದೃಢ ಸಂಕಲ್ಪದಿಂದ ಗುರಿ ಸಾಧನೆ ಸಾಧ್ಯ ಎಂಬುದನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡೆಗಳೊಂದಿಗೆ ಆಯ್ಕೆಯಾಗುವ ಮೂಲಕ ನಮ್ಮ ಕಾಲೇಜಿಗೆ, ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ನಂತರ ರಾಷ್ಟ್ರ ಮಟ್ಟದ ಜೋಡೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಪ್ರಥಮ ಪಿಯುಸಿ ಆಶೀಶ್ ಧನರಾಜ್, ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಶ್ವಾಸ ವಿಠಲ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಬಂಡಂಗ್ ಸನಪ್ ಜಮೀರ್ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಪಾಂಡುರಂಗ ಚಿಂಚನಸೂರ, ಗುರುಶಾಂತ್ ಹೂಗಾರ, ಆನಂದ , ಮಲಕಮ್ಮ ಪಾಟೀಲ್, ವಿ ಜಿ ಮಹಿಳಾ ಪ.ಪೂ ಮಹಾವಿದ್ಯಾಲಯದ ಸರೋಜಾದೇವಿ ಪಾಟೀಲ್ ಸಂಗೀತಾ ಸಡಕೀನ್, ಅಶ್ವಿನಿ ಪಾಟೀಲ್, ಭಾಗ್ಯಶ್ರೀ ಬೇನೂರ, ರುದ್ರಾಂಬಿಕಾ ಕಿರಾಣಿ, ಮಧುಶ್ರೀ ಘಂಟಿ, ವಿಜಯಲಕ್ಷ್ಮಿ ಶಾಬಾದಿ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News