ಕಲಬುರಗಿ | ಚಾಲಕ ನಿಯಂತ್ರಣ ತಪ್ಪಿ ಮರಳು ತುಂಬಿದ ಟಿಪ್ಪರ್ ಪಲ್ಟಿ
Update: 2025-02-23 21:57 IST
ಕಲಬುರಗಿ : ಚಾಲಕನ ನಿಯಂತ್ರಣ ತಪ್ಪಿ ಮರಳು ತುಂಬಿದ ಟಿಪ್ಪರ್ ಒಂದು ಪಲ್ಟಿಯಾಗಿರುವ ಘಟನೆ ಕಾಳಗಿ ತಾಲ್ಲೂಕಿನ ಕಾಟಮದೇವರ ಹಳ್ಳಿ ಬಳಿ ರವಿವಾರ ನಡೆದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮರಳು ತಿಂಬಿದ್ದ ಟಿಪ್ಪರ್ ಮುಂದಕ್ಕೆ ಸಾಗುವಾಗ ನೀರು ಇರುವ ಹೊಂಡದಲ್ಲಿ ಸಿಲುಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.