×
Ad

ಕಲಬುರಗಿ | ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಭವ್ಯ ಮೆರವಣಿಗೆಗೆ ಚಾಲನೆ

Update: 2025-11-02 22:00 IST

ಕಲಬುರಗಿ : ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಕಲಬುರಗಿ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನಡೆಸಲಾಯಿತು.

ಸಾನಿಧ್ಯ ವಹಿಸಿದ್ದ ಮಳಖೇಡದ ಹಝರತ್‌ ಸೈಯದ ಶಹಾ ಮುಸ್ತಫಾ ಖಾದ್ರಿ ಅವರು ಮಾತನಾಡಿ, ಮಾನವೀಯತೆ ಇಲ್ಲದೇ ಮಾನವರಾದರೆ ಲಾಭವಿಲ್ಲ, ಮನುಷ್ಯತ್ವ ಇರುವವರು ಮಾಡಿದ ಕೆಲಸವು ದೇವರಿಗೂ ಸಲ್ಲುತ್ತದೆ. ಇತಿಹಾಸ ತಿಳಿಯುವ ಜೊತೆಗೆ ಕನ್ನಡಕ್ಕಾಗಿ ಜೀವನ ನಡೆಸುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್‌ ಅವರು ಮಾತನಾಡಿ, ರಾಷ್ಟ್ರಕೂಟ ಉತ್ಸವ ಮತ್ತು ಅಮೋಘವರ್ಷ ನೃಪತುಂಗರ ಜಯಂತಿ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಹೋರಾಟಗಾರರಾದ ಡಾ.ಲಕ್ಷ್ಮಣ ದಸ್ತಿ ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು, ಅದಕ್ಕಾಗಿ ಭವ್ಯ ಇತಿಹಾಸ ಹೊಂದಿರುವ ರಾಷ್ಟ್ರಕೂಟರು ಕನ್ನಡಕ್ಕೆ ಮೊದಲ ಕೃತಿ ಕವಿರಾಜಮಾರ್ಗ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಧರ್ಮ, ಜಾತಿ ಆಧಾರಿತ ಹೋರಾಟಕ್ಕಿಂತ ಅಭಿವೃದ್ಧಿಯಾಧಾರಿತ ಹೋರಾಟ ಮಾಡಬೇಕು ಎಂದರು.

ಸಾನಿಧ್ಯ ವಹಿಸಿದ್ದ ಮಳಖೇಡದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಕಲ್ಯಾಣ ನಾಡು ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಮಾತನಾದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮಳಖೇಡದ ಕಾರ್ತಿಕೇಶ್ವರ ಮಠದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮತ್ತು ರೋಜಾ ಎ ರಹಮಾನಿಯ ದರ್ಗಾದ ಹಝರತ ಸೈಯದ್‌ ಶಹಾ ಮುಸ್ತಫಾ ಖಾದ್ರಿ ಅವರು ವಹಿಸಿದ್ದರು.

ನಾಡದೇವತೆ ಭುವನೇಶ್ವರಿ ಭಾವಚಿತ್ರಕ್ಕೆ ವಿಶ್ವ ಹಿಂದೂ ಪರಿಷತ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಅವರು ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಪಾಲಿಕೆ ಸದಸ್ಯ ಸಚಿನ ಶಿರವಾಳ, ಪತ್ರಕರ್ತರಾದ ದೇವಯ್ಯ ಗುತ್ತೇದಾರ, ರಾಚಪ್ಪ ಜಂಬಗಿ, ದೇವೇಂದ್ರ ಜಾಡಿ, ಡಾ.ಅಸ್ಲಮ ಚೊಂಗೆ, ವಿಗ್ನೇಶ್ವರ ಟೈಗರ, ಗೌತಮ ಕರಿಕಲ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಬಾಬು ಮದನಕರ ಸಂಘಟಕರಾದ ಅವಿನಾಶ ಕಪನೂರ, ಪ್ರವೀಣ ಖೇಮನ, ಮಲ್ಲಿಕಾರ್ಜುನ ದೊರೆ, ಅರುಣ ತವಡೆ, ದತ್ತು ಜಮಾದಾರ, ರಾಣೇಶ ಸಾವಳಗಿ, ಮಲ್ಲು ಸಂಕನ, ಸುನೀಲ, ಕುಶಾಲ ಕಪನೂರ, ಶ್ರೀಶೈಲ ಪೂಜಾರಿ, ಅಬ್ದುಲ್‌ ಡಬರಾಬಾದ, ಸುಧಾಕರ ಸರಸಂಬಿ, ಪುಟ್ಟು ಸಿರಸಗಿ, ಆಕಾಶ ಭೀಮಳ್ಳಿ, ಸೇರಿದಂತೆ ಸಂಘಟನೆಯ ಹಲವಾರು ಪಧಾಧಿಕಾರಿಗಳು ಇದ್ದರು.

ಶಿಕ್ಷಕ ರವಿಕುಮಾರ ಹೂಗಾರ ನಿರೂಪಿಸಿದರು. ನಾಗು ಡೊಂಗರಗಾಂವ ಸ್ವಾಗತಿಸಿದರು. ಜೈಭೀಮ ಮಾಳಗೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News