ಕಲಬುರಗಿ | ಡಾ.ಅಪ್ಪಾಜಿಯವರಿಗೆ ಕಸಾಪದಿಂದ ಶ್ರದ್ಧಾಂಜಲಿ
Update: 2025-08-16 21:17 IST
ಕಲಬುರಗಿ : ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳು, ಮಹಾದಾಸೋಹಿಗಳಾದ ಡಾ.ಶರಣಬಸಪ್ಪ ಅವರ ಲಿಂಗೈಕ್ಯ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ಅಧ್ಯಕ್ಷತೆಯಲ್ಲಿ ಅಗಲಿದ ಪೂಜ್ಯ ಮಹಾದಾಸೋಹಿಗಳಿಗೆ ಗಣ್ಯರು ನಮನಗಳು ಸಲ್ಲಿಸಿದರು. ಶಿವರಾಜ ಅಂಡಗಿ, ಶರಣರಾಜ ಛಪ್ಪರ ಬಂಧಿ, ರವೀಂದ್ರಕುಮಾರ ಭಂಟನಳ್ಳಿ, ಡಾ.ಅರುಣಕುಮಾರ ಲಗಶೆಟ್ಟಿ, ಮಹಾದೇವಪ್ಪ, ಶಕುಂತಲಾ ಪಾಟೀಲ, ಧರ್ಮರಾಜ ಜವಳಿ, ಉಮೇಶ ಕೋಟನೂರ ಉಪಸ್ಥಿತರಿದ್ದರು.