ಕಲಬುರಗಿ | ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ
Update: 2025-11-23 18:57 IST
ಕಲಬುರಗಿ : ಸಾಲಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ತಾಲೂಕಿನ ಕರಿಕಲ್ ತಾಂಡಾದಲ್ಲಿ ಸಂಭವಿಸಿದೆ.
ಕರಿಕಲ್ ತಾಂಡಾ ನಿವಾಸಿ ಪ್ರಕಾಶ್ ಸೇವು ಜಾಧವ್(39) ಆತ್ಮಹತ್ಯೆ ಮಾಡಿಕೊಂಡ ರೈತ.
ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ಪ್ರಕಾಶ್, ಕಾಳಗಿ ರೈತ ಸೇವಾ ಸಹಕಾರ ಸಂಘದಲ್ಲೂ 25,000 ರೂ. ಸಾಲಮಾಡಿಕೊಂಡಿದ್ದರು.
ಇತ್ತೀಚೆಗೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಕೂಡ ಅತಿವೃಷ್ಟಿಯಿಂದ ನಾಶವಾಗಿತ್ತು. ಇದರಿಂದ ಮನನೊಂದುಕೊಂಡಿದ್ದ ಪ್ರಕಾಶ್, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.