ಕಲಬುರಗಿ | ವೀರಶೈವ ಲಿಂಗಾಯತ ಸಂಘಟನಾ ವೇದಿಕೆಗೆ ವಿನೋದ ಪಾಟೀಲ, ಶರಣಬಸಪ್ಪ ನರೂಣಿ ನೇಮಕ
Update: 2025-08-26 21:21 IST
ಕಲಬುರಗಿ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಜ್ಯಾಧ್ಯಕ್ಷರಾದ ರವಿ ಬಿರಾದಾರ ಆದೇಶದ ಮೇರೆಗೆ ತಾಲೂಕುಸಂಘಟನಾ ವೇದಿಕೆ ಅಧ್ಯಕ್ಷರನ್ನಾಗಿ ವಿನೋದ ಪಾಟೀಲ ಸರಡಗಿ ಹಾಗೂ ಆಳಂದ ತಾಲೂಕು ಸಂಘಟನಾ ವೇದಿಕೆ ಸಂಘಟನಾ ಅಧ್ಯಕ್ಷರನ್ನಾಗಿ ಶರಣಬಸಪ್ಪ ವಿ.ನರೂಣಿ ಅವರನ್ನು ನೇಮಕ ಮಾಡಲಾಗಿದೆ.
ಆಯ್ಕೆಯಾದ ಪದಾಧಿಕಾರಿಗಳು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ತತ್ವಸಿದ್ಧಾಂತ, ಶಿಸ್ತುಬದ್ಧತೆಯಡಿಯಲ್ಲಿ ನಾವೆಲ್ಲರೂ ಒಂದೇ ಎಂದು ಕಾರ್ಯನಿರ್ವಹಿಸಬೇಕೆಂದು ರವಿ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಗೆ ಆಯ್ಕೆಯಾದ ಇಬ್ಬರನ್ನು ಸಮಾಜದ ಮುಖಂಡರು ಸನ್ಮಾನಿಸಿದರು.