ಕಲಬುರಗಿ | ಉತ್ತಮ ಆರೋಗ್ಯಕ್ಕೆ ಯೋಗವೇ ಮದ್ದು : ಬಾಬುರಾವ್ ಪಾಟೀಲ್
Update: 2025-06-21 23:31 IST
ಕಲಬುರಗಿ: ಇಂದಿನ ದಿನಮಾನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಜನರು ಅನಾರೋಗ್ಯಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಉತ್ತಮ ಆರೋಗ್ಯವನ್ನು ವೃದ್ಧಿಸಲು ಯೋಗವೇ ಮದ್ದು ಆಗಿದೆ ಎಂದು ನಿವೃತ್ತ ಆರೋಗ್ಯ ಅಧಿಕಾರಿಗಳಾದ ಬಾಬುರಾವ್ ಪಾಟೀಲ್ ಚಿತ್ತಕೋಟೆ ಹೇಳಿದರು.
ಅವರು ನಗರದ ಜಿಡಿಎ ಲೇಔಟಿನ ದತ್ತಾತ್ರೆಯ ಪಾಟೀಲ ರೇವೂರ ಉದ್ಯಾನವನವದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭೀಮಾಶಂಕರ ಅಂಕಲಗಿ, ಎಸ್.ಜಿ.ಬಿರಾದಾರ, ಸಾಯಿಬಣ್ಣ ನೀಲಪ್ಪಗೋಳ, ಮಲ್ಲಣ್ಣ ದೇಸಾಯಿ, ನಿಜಲಿಂಗ ಗುಗ್ಗರಿ, ಶಿವಕುಮಾರ ದೇಸಾಯಿ, ರಾಜಶೇಖರ ಸರ್ ಹಾಗೂ ಇತರರು ಉಪಸ್ಥಿತರಿದ್ದರು.