×
Ad

ಆಳಂದ | ಸೌಹಾರ್ದ ನಡಿಗೆಗಾಗಿ ಮಾನವ ಸರಪಳಿ

Update: 2025-06-26 22:20 IST

ಕಲಬುರಗಿ: "ಯುದ್ಧವೇನು ಪರಿಹಾರವಲ್ಲ, ಶಾಂತಿಯೇ ನಿಜವಾದ ವಿಜಯ" ಎಂದು ಹೋರಾಟಗಾರ್ತಿ ಮೀನಾಕ್ಷಿ ಬಾಳೆ ಅವರು ಶಾಂತಿಯ ಪರ ಧ್ವನಿ ಎತ್ತಿದರು.

ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಸೌಹಾರ್ದ ಕರ್ನಾಟಕ ಆಳಂದ ತಾಲ್ಲೂಕು ಸಮಿತಿಯಿಂದ ‘ಯುದ್ಧ ಬೇಡ, ಶಾಂತಿ ಬೇಕು’ ಎಂಬ ಘೋಷಣೆಯೊಂದಿಗೆ ಸೌಹಾರ್ದ ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಯುದ್ಧವಿಲ್ಲದ ಜಗತ್ತು ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಯಾವುದೇ ದೇಶವೂ ಯುದ್ಧ ಮಾಡದೇ ಶಾಂತಿಯನ್ನು ಕಾಪಾಡಬೇಕು,” ಎಂದು ಅವರು ಹೇಳಿದರು.

ಜಿಲ್ಲಾ ಬಂಡಾಯ ಸಾಹಿತಿ ಡಾ.ಪ್ರಭು ಖಾನಾಪೂರ, ಕಿಸಾನ್‌ ಸಭಾ ರಾಜ್ಯ ಕಾರ್ಯಾಧ್ಯಕ್ಷ ಹೋರಾಟಗಾರ ಮೌಲಾ ಮುಲ್ಲಾ, ಜಿಪಂ ಮಾಜಿ ಸದಸ್ಯೆ ಪೂಜಾ ಆರ್.ಲೋಹಾರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಲ್ಯಾಣಿ ತುಕ್ಕಾಣಿ, ಬಾಖರ್ ಅಲಿ ಜಮಾದಾರ, ಅರೀಫ್ ಅಲಿ ಲಂಗಡೆ, ಸುಲೇಮಾನ್ ನೂರಿ, ನಾಮದೇವ್ ಕೊರಳ್ಳಿ, ಸಿದ್ಧಲಿಂಗ ಮಲಶೇಟ್ಟಿ, ಮಹಾದೇವ ಜಿಡ್ಡೆ, ಕರೀಬಾ ಖೂರೋಷಿ, ಸಿದ್ಧಾರ್ಥ ಹಸೂರೆ, ಸಲ್ಮಾನ ಸೇರಿದಂತೆ ಹಲವರು ಪಾಲ್ಗೊಂಡರು.

ನಡಿಗೆಯಲ್ಲಿ ವಿಧ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಾನವ ಸರಪಳಿ ರೂಪಿಸಿ ಶಾಂತಿಯ ಘೋಷಣೆಗಳನ್ನು ಕೂಗಿದರು. ಘೋಷಣಾಕಾರ ಪ್ರಮೋದ ಪಾಂಚಾಳ ಅವರಿಂದ ಕ್ರಾಂತಿಕಾರಿ ಘೋಷಣೆಗಳು ಮೊಳಗಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News