×
Ad

ಕಲಬುರಗಿ | ಪಿಡಬ್ಲ್ಯೂಡಿ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ದಾಳಿ: ಪರಿಶೀಲನೆ

Update: 2025-05-31 13:33 IST

ಕಲಬುರಗಿ: ಬಳ್ಳಾರಿ ಪಿಡಬ್ಲ್ಯೂಡಿ (ಸಾರ್ವಜನಿಕ ಕಾರ್ಯಗಳ ಇಲಾಖೆ) ವೃತ್ತ ಕಚೇರಿಯ ಎಸ್.ಇ (ಕಾರ್ಯನಿರ್ವಹಣಾ ಇಂಜಿನಿಯರ್) ಅಮಿನ್ ಮುಕ್ತಾರ್ ಅವರ ವಿರುದ್ದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ, ಕಲಬುರಗಿ ನಗರದಲ್ಲಿರುವ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಪರಿಶೀಲನೆ  ನಡೆಸಿದ್ದಾರೆ.

ಕಲಬುರಗಿ ನಗರದ ಹುಸೇನ್ ಗಾರ್ಡನ್ ಪ್ರದೇಶದಲ್ಲಿರುವ ಅವರ ನಿವಾಸ, ಏಷಿಯನ್ ಮಾಲ್‌ನಲ್ಲಿರುವ ಅಪಾರ್ಟ್‌ಮೆಂಟ್, ಮತ್ತು ಅವರ ಸಹೋದರನ ಏಷಿಯನ್ ಲೈಫ್‌ಸ್ಟೈಲ್ ಅಪಾರ್ಟ್‌ಮೆಂಟ್ ಸೇರಿ ಹಲವೆಡೆ ಪರಿಶೀಲನೆ ನಡೆಸಲಾಗುತ್ತಿದೆ. 

ಇದೇ ಪ್ರಕರಣದ ಹಿನ್ನೆಲೆಯಲ್ಲಿ ಕಲಬುರಗಿ ಮಾತ್ರವಲ್ಲದೇ, ಬಳ್ಳಾರಿ ಹಾಗೂ ಬಸವಕಲ್ಯಾಣದಲ್ಲೂ ದಾಳಿ ನಡೆದಿದೆ. ಅಮಿನ್ ಮುಕ್ತಾರ್ ಅವರು ಈ ಮೂರು ನಗರಗಳಲ್ಲಿ ಮನೆ ಹಾಗೂ ವಿವಿಧ ಆಸ್ತಿಗಳನ್ನು ಹೊಂದಿದ್ದಾಗಿ ಶಂಕಿಸಲಾಗಿದೆ. ಈ ಹಿನ್ನಲೆಯಲ್ಲಿ ಕಲಬುರಗಿ ಹಾಗೂ ಬಳ್ಳಾರಿಯ ಲೋಕಾಯುಕ್ತ ಅಧಿಕಾರಿಗಳಿಂದ ಜಂಟಿ ಪರಿಶೀಲನೆ ಪ್ರಾರಂಭವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News