×
Ad

ಪ್ರಜಾಪ್ರಭುತ್ವದಲ್ಲಿ ಅಹಂನಿಂದ ಮಾತನಾಡಿದರೆ ಜನ ಪಾಠ ಕಲಿಸುತ್ತಾರೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

Update: 2024-02-26 23:15 IST

ಕಲಬುರಗಿ: ಸರಕಾರಿ ಏಜೆನ್ಸಿಗಳನ್ನು ದುರಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವದಲ್ಲಿ ಅಹಂನಿಂದ ಮಾತನಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಸರಕಾರಿ ಮಷಿನರಿಗಳನ್ನು ದುರಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ  ಹೇಳಿದ್ದಾರೆ.

ಸೋಮವಾರ ಸುರಪುರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯಕ ನಿಧನ ಹಿನ್ನೆಲೆ ಅಂತಿಮ ದರ್ಶನಕ್ಕೆ ಕಲಬುರಗಿ ವಿಮಾನದಲ್ಲಿ ಬಂದಿಳಿದು ಮಾಧ್ಯಮಗಳೊಂದಿಗೆ ಮಾತನಾಡಿದರು.

ನಾವು ಮತದಾರರನ್ನು ಉಳಿಸಿಕೊಳ್ಳಿಸಿಕೊಳ್ಳಲು ಎಸ್.ಪಿ, ಆಮ್ಆದ್ಮಿ ಪಾರ್ಟಿ, ಜಾರ್ಖಂಡ್ ನಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ.  ಪ್ರಜಾಪ್ರಭುತ್ವದಲ್ಲಿ ಯಾರಾದರೂ ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಪ್ರಜಾಪ್ರಭುತ್ವ ಇದು ಯಾರೋ ಒಬ್ಬರ ಕೈಯಲ್ಲಿ ಇಲ್ಲ. ನೀವು ಸರಕಾರಿ ಸಂಸ್ಥೆಯನ್ನು ದುರಪಯೋಗ ಮಾಡಿಕೊಂಡಿದ್ದೀರಿ ಎಂದು ಅರ್ಥವಾಗುತ್ತದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವಾರಜ್ ಸಿಂಗ್ ಚೌಹಾಣ್ 371 ಜೆ ಹೊಂದಿರುವ ಕಲಬುರಗಿಗೆ ಕೇಂದ್ರದಿಂದ 10 ಸಾವಿರ ಕೋಟಿ ಕೊಡಿಸಿ ಈ ಭಾಗವನ್ನು ಉದ್ಧಾರ ಮಾಡುವ ಬಗ್ಗೆ ಮಾತನಾಡಬೇಕು. ಸುಮ್ಮನೆ ಟೀಕೆ ಮಾಡಿ ಹೊಗುವುದಲ್ಲ. ಬಿಜೆಪಿ ಮಂತ್ರಿಗಳಿಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದು ಮಾತ್ರ ಗೊತ್ತು. ನಮ್ಮನ್ನು ಎದುರಿಸಲು ಕಷ್ಟವಾಗುತ್ತಿರುವುದರಿಂದ ಈ ರೀತಿ ಮಾತನಾಡುತ್ತಾರೆ ಎಂದರು.

ವೆಂಕಟಪ್ಪ ನಾಯಕ್ ನನ್ನನು ಪ್ರತಿಯೊಂದು ಚುನಾವಣೆಯಲ್ಲಿ ಕರೆಯುತ್ತಿದರು. ನಾವು ನೀಡಿರುವ ಕೆಲಸ ಚಾಚು ತಪ್ಪದೆ ಮಾಡುತ್ತಿದರು. ಈ ಬಾರಿ ಅವರಿಗೆ ಲೋಕಸಭೆಗೆ ಕರೆಸಿಕೊಳ್ಳಬೇಕೆಂದು ಅಂದುಕೊಂಡಿದ್ದೇವೆ ಆದರೆ ವಿಷಯ ಬಹಿರಂಗ ಪಡಿಸಲಿಲ್ಲ. ಅವರ ಆಕಸ್ಮಿಕ ನಿಧನ ನಮ್ಮಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News