×
Ad

ಕಲಬುರಗಿ | ಮಗು ಅಪಹರಣ ಪ್ರಕರಣ ; ಮೂವರು ಮಹಿಳೆಯರ ಬಂಧನ : ಪೊಲೀಸ್ ಕಮಿಷನರ್

Update: 2024-11-27 12:30 IST

ಕಲಬುರಗಿ : ಕಲಬುರಗಿಯ ಜಿಲ್ಲಾಸ್ಪತ್ರೆಯಿಂದ ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂವರು ಆರೋಪಿಗಳು ಇಲ್ಲಿನ ಎಂ.ಎಸ್.ಕೆ ಮಿಲ್ ಸಮೀಪದ ಶಾ ಜೀಲಾನಿ ದರ್ಗಾದ ನಿವಾಸಿಗಳಾಗಿದ್ದಾರೆ. ಉಮೇರಾ ಆವೇಝ್ ಶೇಖ್, ನಸ್ರೀನ್ ಅಬ್ದುಲ್ ರಹೀಂ ಮತ್ತು ಫಾತೀಮಾ ಫಯಾಝ್ ಶೇಖ್ ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು.

ಆರೋಪಿಗಳು ಮಗುವನ್ನು 50 ಸಾವಿರಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಈ ಕುರಿತು ಅವರು ಮುಂಗಡವಾಗಿ 25 ಸಾವಿರ ಹಣ ಕೂಡ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಒಬ್ಬ ಮಹಿಳೆಗೆ 7 ವರ್ಷದಿಂದ ಮಗು ಆಗಿರುವುದಿಲ್ಲ, ಆಕೆಗೆ ಮಾರಾಟ ಮಾಡಲು ಈ ಮಗುವನ್ನು ಅಪಹರಿಸಲಾಗಿದೆ ಎಂದು ಹೇಳಿದರು.

ಇಬ್ಬರು ಮಹಿಳೆಯರು ಸೋಮವಾರ ಮಧ್ಯಾಹ್ನ ನರ್ಸ್ ವೇಷದಲ್ಲಿ ಬಂದು ಮಗುವನ್ನು ಅಪಹರಿಸಿದ್ದು, ಅವರನ್ನು ಪತ್ತೆ ಹಚ್ಚಲು 3 ತಂಡಗಳು ರಚಿಸಲಾಗಿತ್ತು. ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಈ ಪ್ರಕರಣವನ್ನು ಬೇಗನೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದ ಅವರು, ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸಿಪಿ ಕನಿಕಾ ಸಿಕ್ರಿವಾಲ್ ಮತ್ತಿತರ ಹಿರಿಯ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News