×
Ad

ಉದಯಗಿರಿ ಘಟನೆ ಬಿಜೆಪಿ, ಸಂಘ ಪರಿವಾರದ ಕೃಪಾಪೋಷಿತ ಕುಕೃತ್ಯ : ಬಿ.ಕೆ.ಹರಿಪ್ರಸಾದ್

Update: 2025-02-16 16:46 IST

ಬಿ.ಕೆ.ಹರಿಪ್ರಸಾದ್ 

ಕಲಬುರಗಿ : ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ ಹೋಗಿ ಬಿಡುತ್ತಾರೆ. ಇದೇನು ಹೊಸದಲ್ಲ, ನನ್ನ ಬಳಿ ವಿಡಿಯೋ ಇವೆ. ಮೈಸೂರಿನ ಉಯದಗಿರಿ ಘಟನೆಗೆ ಬಿಜೆಪಿ ಮತ್ತು ಸಂಘ ಪರಿವಾರದ ಕೃಪಾಪೋಷಿತ ಕುಕೃತ್ಯ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದರು.

ರವಿವಾರ ನಗರದಲ್ಲಿ ಮಾತನಾಡಿ ಅವರು, ಆರೆಸ್ಸೆಸ್ ನ ಅವರ ಪಿತೃ ಪಕ್ಷಕ್ಕೆ ನೂರು ವರ್ಷ ತುಂಬುತ್ತಿದೆ. ಹಾಗಾಗಿ ಅವರೇ ಮಾಡುತ್ತಾರೆ. ನೂರು ವರ್ಷ ಅವರು, ಅವರ ಎಲ್ಲಾ ಚಿಂತನೆಗಳು ಅನುಷ್ಟಾನ ತರೋದಕ್ಕೆ ಪ್ರಯತ್ನ ಆಗಿದೆ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನಗಳು ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯವು ಬಸವಣ್ಣ, ಕನಕದಾಸ, ನಾರಾಯಣ ಗುರುಗಳು, ಶಿಶುನಾಳ ಶರೀಫರ ನಾಡು, ಇಲ್ಲಿ ಯಾವುದೇ ಗಲಭೆ ಮತ್ತು ಹಿಂಸೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂಸೆ, ಭಯದ ವಾತಾವರಣ ಸೃಷ್ಟಿಯಾಗಿತ್ತು. ಈಗ ಎರಡೇ ತಿಂಗಳಲ್ಲಿ ಶೇ.90ರಷ್ಟು ಕಡಿಮೆಯಾಗಿದೆ ಎಂದರು.

ಕರ್ನಾಟಕ ರಾಜ್ಯವು, ಸರ್ವಜನಾಂಗದ ಶಾಂತಿಯ ತೊಟ ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದೇವೆ. ಯಾರು ಗೊಂದಲ ಮಾಡಲು ಸಾಧ್ಯವಿಲ್ಲ. ಧರ್ಮ, ಜಾತಿ, ಭಾಷೆಯವರು ಯಾರೆ ಆಗಿರಲಿ ಕಾನೂನನ್ನು ಕೈಗೆ ತೆಗೆದುಕೊಂಡು, ರಾಜ್ಯದ ಶಾಂತಿ ಕೆಡುವ ಪ್ರಯತ್ನ ಮಾಡಿದರೆ, ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News