×
Ad

ಜೇವರ್ಗಿ: ಪಿಕಾರ್ಡ್‍ ಅಧ್ಯಕ್ಷರಾಗಿ ಪ್ರತಾಪ ಕಟ್ಟಿ,ಉಪಾಧ್ಯಕ್ಷರಾಗಿ ಸಾಂಬಶಿವ ಹಿರೇಮಠ ಆಯ್ಕೆ

Update: 2025-09-02 22:51 IST

ಕಲಬುರಗಿ: ಜೇವರ್ಗಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ (ಪಿಕಾರ್ಡ್‌) ಗೆ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರತಾಪ ತಂದೆ ಚಿದಾನಂದ ಕಟ್ಟಿ ಅಧ್ಯಕ್ಷ, ಸಾಂಬಶಿವ ತಂದೆ ಮಲ್ಲಯ್ಯ ಹಿರೇಮಠ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರತಾಪ ಕಟ್ಟಿ 08 ಮತಗಳು ಪಡೆದುಕೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಸಾಂಬಶಿವ ಮಲ್ಲಯ್ಯ ಹಿರೇಮಠ 08 ಮತಗಳು ಪಡೆದುಕೊಂಡಿದ್ದಾರೆ. ಹಾಗೂ ಜೆಡಿಎಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಾಬುಗೌಡ ಮಾಲಿಪಾಟೀಲ್, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಇಂದಿರಾ ಚನ್ನಪ್ಪಗೌಡ 07 ಮತಗಳು ಪಡೆದುಕೊಂಡಿದ್ದಾರೆ. ಒಂದು ಮತದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಮೋದ ಕರಣಂ ತಿಳಿಸಿದ್ದಾರೆ.

40 ವರ್ಷಗಳ ನಂತರ ನಡೆದ ಪಿಕಾರ್ಡ್ ಚುನಾವಣೆ ಜಿದ್ದಾಜಿದ್ದಿನಿಂದ ಆ.17 ರಂದು ನಡೆದಿತ್ತು.

ಕಾಂಗ್ರೆಸ್ ವಿಜಯೋತ್ಸವ:

ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದಂತೆಯೆ ಕಾಂಗ್ರೆಸ್ ಪಕ್ಷದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ರುಕುಂಪಟೇಲ್ ಇಜೇರಿ, ಮಾಜಿ ಜಿಪಂ ಸದಸ್ಯ ಶಾಂತಪ್ಪ ಕುಡಲಗಿ, ಕಾಶಿರಾಯಗೌಡ ಯಲಗೋಡ, ರಾಜಶೇಖರ ಸೀರಿ, ಷಣ್ಮುಖಪ್ಪ ಹಿರೇಗೌಡ, ಚಂದ್ರಶೇಖರ ಹರನಾಳ, ಸಂಗನಗೌಡ ಗುಳ್ಯಾಳ, ಕಾಸಿಂ ಪಟೇಲ್ ಮುದಬಾಳ, ಮಾಜೀದ್ ಸೇಠ ಗಿರಣಿ, ವಿಜಯಕುಮಾರ ಹಿರೇಮಠ, ಎ.ಬಿ.ಹಿರೇಮಠ, ಅಬ್ದುಲ್ ರಹಿಮಾನ್ ಪಟೇಲ್, ಸಲ್ಲಿಂ ಕಣ್ಣಿ, ರಜಾಕ ಮನಿಯಾರ, ಶಾಂತಗೌಡ ಮಾಗಣಗೇರಿ, ಸೋಫಿ ಗಂವ್ಹಾರ, ಪ್ರೇಮ ಕಟ್ಟಿ, ಚಂದು ಮ್ಯಾಗೇರಿ, ಪಿಕಾರ್ಡ್ ಬ್ಯಾಂಕ್ ಅಧಿಕಾರಿಗಳಾದ ಸಂಜಯ ಕಪೂರ, ಕಲ್ಯಾಣರಾವ್ ಕಣಮೇಶ್ವರ, ನಾನಾಗೌಡ ಬಿರೆದಾರ, ಶಾಂತಗೌಡ, ಮಿಲಿಂದ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News