×
Ad

ಪ್ರವೀಣ ಹರವಾಳ ಶ್ರಮಕ್ಕೆ ಸಂದ ಗೌರವ: ಡಾ.ಕಾಮರೆಡ್ಡಿ

Update: 2025-09-28 22:08 IST

ಕಲಬುರಗಿ: ಪ್ರವೀಣ ಪಾಟೀಲ್ ಅವರ ಪಕ್ಷದಲ್ಲಿ ನಿರ್ವಹಿಸಿದ ಕಾರ್ಯಕ್ಕೆ ಜೆಸ್ಕಾಂ ನಿಗಮದ ಅಧ್ಯಕ್ಷ ಸ್ಥಾನದ ಹುದ್ದೆ ಸಿಕ್ಕಿರುವುದು, ಅವರ ಶ್ರಮಕ್ಕೆ ಸಂದ ಗೌರವ ಎಂದು ಕಲಬುರಗಿ ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಡಾ.ಶರಣಬಸವಪ್ಪ ಕಾಮರೆಡ್ಡಿ ಹೇಳಿದ್ದಾರೆ.

ನಗರದ ಖೂಭಾ ಪ್ಲಾಟ್ ನಲ್ಲಿರುವ ಜಿಲ್ಲಾ ರಡ್ಡಿ ಸಮಾಜದ ಕಾರ್ಯಲಯದಲ್ಲಿ ಜೆಸ್ಕಾಂ ನಿಗಮದ ಅಧ್ಯಕ್ಷರಾಗಿ ನೇಮಕವಾಗಿರುವ ಪ್ರವೀಣ ಪಾಟೀಲ್ ಹರವಾಳ ಅವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿ, ಪ್ರವೀಣ ಪಾಟೀಲ್ ಹರವಾಳ ಅವರು ಕ್ರೀಯಾಶೀಲರಾಗಿದ್ದು ಮುಂದೆ ಕೂಡ ಸರ್ವ ಧರ್ಮದವರನ್ನು ಜೊತೆಗೆ ತೆಗೆದುಕೊಂಡು ಹೋಗುವ ಶಕ್ತಿ ಅವರಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಚಂದ್ರಶೇಖರರೆಡ್ಡಿ ಪರಸರೆಡ್ಡಿ,ಜಾನಪಗೌಡ, ಸಿದ್ದರಡ್ಡಿ ಬಲಕಲ್, ಮೈಪಾಲರಡ್ಡಿ ಇಟಗಿ, ಗುರುನಾಥ ಗೌಡ, ಮಹೇಶ ರಡ್ಡಿ, ಬಿ.ಎಸ್.ದೇಸಾಯಿ, ಅನುಫ್ ಸಿದ್ದಲಿಂಗ್ ರಡ್ಡಿ, ಶಂಕರ ಗೌಡ, ವೈಭವ ರಡ್ಡಿ, ರಮೇಶ ಪಾಟೀಲ್, ಜಿ.ಜಿ.ವಣಿಕ್ಯಾಳ, ಸಂಜಿವರಡ್ಡಿ, ನವೀಶ ರಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News