ಕಾಳಗಿ: ರಟಕಲ್ ಪಿಡಿಒ ವಿರುದ್ಧ ಕ್ರಮಕ್ಕೆ ಅಧ್ಯಕ್ಷರ ಆಗ್ರಹ
ಕಲಬುರಗಿ: ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕರ ವಸೂಲಿ ಮಾಡಿ ಪಂಚಾಯತಿ ನಿಧಿಗೆ ಜಮಾ ಮಾಡದೇ ಮನ ಬಂದಂತೆ ಖರ್ಚು ಮಾಡಿರುವುದಕ್ಕೆ ಕ್ರಮ ಕೈಗೊಂಡು ಬೇರೆ ಪಿಡಿಓ ನೇಮಕ ಮಾಡಬೇಕೆಂದು ರಟಕಲ್ ಗ್ರಾಮ ಪಂಚಾಯತಿ ಅಧ್ಯಕ್ಷ ಜಗದೀಪ್ ಬಿ. ಮಾಳಗಿ ಒತ್ತಾಯಿಸಿದ್ದಾರೆ.
4 ತಿಂಗಳಿಂದ ಪ್ರಭಾರಿ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡ ಸಂತೋಷಕುಮಾರ ತೇಲಿ ಕಾರ್ಯಾಲಯಕ್ಕೆ ಪ್ರತಿ ದಿನ ಬಾರದೇ, ಮನಬಂದಂತೆ ಪಂಚಾಯತಿಗೆ ಹಾಜರಾಗಿದ್ದು, ಊರಿನ ಯಾವುದೇ ಕಾಮಗಾರಿಗಳು ಕುಂದುಕೊರತೆಗಳನ್ನು ನಿವಾರಿಸದೆ ಮನಬಂದಂತೆ ಕರಾ ವಸೂಲಿಗಾರರೊಂದಿಗೆ ಸೇರಿ ಮ್ಯಾನವೆಲ್ ಹಾಗೂ ಆನ್ಲೈನ್ ಮಶಿನ ಮುಖಾಂತರ ಸುಮಾರು ರೂ.5-6 ಲಕ್ಷ ರೂಪಾಯಿಗಳ ವರೆಗೆ ತೆರಿಗೆ ವಸೂಲಿ ಮಾಡಿದ್ದಾರೆ ಎಂದು ಜಗದೀಪ್ ಆರೋಪಿಸಿದ್ದಾರೆ.
ಈ ಹಣ ಪಂಚಾಯತ ನಿಧಿಗೆ ಜಮಾ ಮಾಡಿಸದೇ ಮನಬಂದಂತೆ ಖರ್ಚು ಮಾಡಿದ್ದು, ತಮ್ಮ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿಕೊಂಡು ಸದಸ್ಯರಿಗೆ ಹಾಗೂ ಸಾರ್ವಜನಿಕರ ಕೈಗೆ ಸಿಗದೆ ಪರದಾಡವಂತೆ ಮಾಡಿದ್ದಾರೆ. ಇಂತಹ ಅಧಿಕಾರಿಗಳನ್ನು ಕೂಡಲೆ ಅಮಾನತ್ತು ಮಾಡಿ, ಕಾನೂನಾತ್ಮಕ ಸೂಕ್ತ ಕ್ರಮ ಜರುಗಿಸಿ, ಬೇರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.