×
Ad

ಆಳಂದ| ಪಿಯು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

ಕನ್ನಡದ ಸಂಸ್ಕೃತಿ ಜಗತ್ತಿನಲ್ಲಿ ಶ್ರೀಮಂತ: ಬಿ.ಎಚ್.ನಿರಗುಡಿ

Update: 2025-09-20 20:42 IST

ಕಲಬುರಗಿ: ಕಲೆ, ಸಾಹಿತ್ಯ, ಸಂಗೀತ ಹಾಗೂ ವೈಚಾರಿಕ ಚಿಂತನಾ ಕ್ಷೇತ್ರದಲ್ಲಿ ಕನ್ನಡಿಗರ ವಿಶಿಷ್ಟ ಕೊಡುಗೆಯಿಂದಾಗಿ ನಮ್ಮ ಸಂಸ್ಕೃತಿಯು ಜಗತ್ತಿನಲ್ಲಿ ಶ್ರೀಮಂತವಾದದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ, ಲೇಖಕ ಬಿ.ಎಚ್.ನಿರಗುಡಿ ಅಭಿಪ್ರಾಯಪಟ್ಟರು.

ಆಳಂದ ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಶನಿವಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಏರ್ಪಡಿಸಿದ ಪಿಯು ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ , ಸಂಸ್ಕೃತಿ ಬಗೆಗೆ ನಾವೂ ಅಭಿಮಾನ ಬೆಳೆಸಿಕೊಳ್ಳಬೇಕು, ಯುವಕರಲ್ಲಿ ಅಧ್ಯಯನಶೀಲತೆ  ಹಾಗೂ ಮಾತೃಭಾಷೆಯಾದ ಕನ್ನಡದ ಪರಂಪರೆಯ ಅರಿವು ಮೂಡಿಸಲು ಪ್ರಾಧಿಕಾರವು ಇಂತಹ ಪ್ರೋತ್ಸಾಹದಾಯಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.

ಆಳಂದದ ಡಿವೈಎಸ್‌ಪಿ ತಮ್ಮರಾಯ ಪಾಟೀಲ ಮಾತನಾಡಿ, ಮೊಬೈಲ್‌,ವಾಟ್ಸಪ್‌, ಪೇಸ್‌ ಬುಕ್‌, ರೀಲ್ಸ್‌ ಬಳಕೆಯಲ್ಲಿ ವಿದ್ಯಾರ್ಥಿಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮರೆಯಬಾರದು, ಪುಸ್ತಕದ ಓದು, ಸಾಹಿತ್ಯದ ಅಧ್ಯಯನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುವದು ಅವಶ್ಯಕವಾಗಿದೆ ಎಂದರು.

ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ರವಿಚಂದ್ರ ಕಂಟೇಕೂರೆ ಅವರು ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲು ಕರ್ನಾಟಕದ ಏಕೀಕರಣದ ಹೋರಾಟ ನಡೆಯಿತು, ನಾವೂ ಜಾತಿ, ಧರ್ಮದಿಂದ ಸಂಕುಚಿತ ಭಾವನೆ ಬೆಳೆಸಿಕೊಳ್ಳುವುದು ಬೇಡ, ಆದರೆ ಭಾಷೆಯು ನಮ್ಮ ವ್ಯಕ್ತಿತ್ವ ರೂಪಿಸುವುದು ಎಂದು ತಮ್ಮ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.

ಸಂಸ್ಥೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಸಂಜಯ ಎಸ್ ಪಾಟೀಲ, ಮಾದನ ಹಿಪ್ಪರಗಿ ಕಾಲೇಜಿನ ಪ್ರಾಚಾರ್ಯ ಶಿವಲಿಂಗಪ್ಪ ಸುತಾರ, ಪ್ರಕಾಶ ಗಾಯಕವಾಡ, ವೀಣಾ ಕೊಗನೂರೆ, ಗೀತಾ ಪಾಟೀಲ, ಬಾಬುರಾವ ಚಿಕಣಿ, ಮಹಾದೇವಿ ಪಾಟೀಲ, ಜಗದೀಶ ಮುಲಗೆ, ಮಹಾದೇವಿ ಮುನ್ನೋಳ್ಳಿ, ಭೀಮಾಶಂಕರ ಅತನೂರೆ, ಸುರೇಶ ಪಾಟೀಲ, ಸುಕಮುನಿ ಪಾಟೀಲ, ದೇವರಾಯ ನಾಯಕ, ಹುಸೇನ್‌ ಶ್ರೀಚಂದ, ವಿಜಯಲಕ್ಷ್ಮಿ ಪಟ್ನೆ, ಸನಾ ಬಂಗರಗಿ, ಶ್ರೀದೇವಿ ಜಕಾಪುರೆ, ಇಕ್ಬಾಲ್‌ಖಾನ್‌ ಪಟೇಲ, ಧನರಾಜ ಪಾಟೀಲ, ಶಾಂತಪ್ಪ ಸುತಾರ,‌ ಆಯೇಷಾ ಸಿದ್ದಕ್ಕಿ, ಶ್ರೀದೇವಿ ಸುತಾರ, ಯೂಸೂಫ್‌ ಖಾನ್ ಉಪಸ್ಥಿತರಿದ್ದರು.

ಆಳಂದ ಪಟ್ಟಣದ ಆರ್‌ಎಂಎಲ್‌ ಪಿಯು ಕಾಲೇಜಿನ ತಂಡವು ಪ್ರಥಮ ಸ್ಥಾನ, ಮಾದನ ಹಿಪ್ಪರಗಿಯ ಕುಮಾರೇಶ್ವರ ಕಾಲೇಜು ದ್ವಿತೀಯ ಸ್ಥಾನ ಹಾಗೂ ಸರಸಂಬಾ ಸರ್ಕಾರಿ ಪಿಯು ಕಾಲೇಜು ತೃತೀಯ ಸ್ಥಾನ ಪಡೆದವು. ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು. ಪಟ್ಟಣದ ಸರ್ಕಾರಿ ಬಾಲಕರ ಪಿಯು ಕಾಲೇಜು,  ಕನ್ಯಾ ಪಿಯು ಕಾಲೇಜು ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿದವು. ಈ ಮೊದಲು ಬಹು ಆಯ್ಕೆ ಮಾದರಿ ಪರೀಕ್ಷೆಯು ಜರುಗಿತು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News