×
Ad

ಕಲಬುರಗಿ| ಬೆಳೆ ವಿಮೆಗಾಗಿ ನೋಂದಣಿ ಮಾಡಿಕೊಳ್ಳಿ: ಸಮದ್ ಪಟೇಲ್

Update: 2025-11-18 10:53 IST

ಕಲಬುರಗಿ: 2025ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಕಡಲೆ, ಜೋಳ, ಗೋಧಿ, ಕುಸುಬೆ, ಭತ್ತ ಹಾಗೂ ನೆಲಗಡಲೆ (ಶೇಂಗಾ) ಬೆಳೆಗಳನ್ನು ಬೆಳೆದಿರುವ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಮ್ಮ ಹತ್ತಿರದ ಬ್ಯಾಂಕ್‍ಗಳಲ್ಲಿ, ಗ್ರಾಮ್-ಒನ್ ಅಥವಾ ಸಿ.ಎಸ್.ಸಿ ಕೆಂದ್ರಗಳಲ್ಲಿ ಬೆಳೆವಿಮೆಗಾಗಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಕಲಬುರಗಿ ಜಂಟಿ ನಿರ್ದೇಶಕರಾದ ಸಮದ್ ಪಟೇಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆವಿಮೆಗಾಗಿ ರೈತರು ಬೆಳೆವಾರು ಪಾವತಿಸಬೇಕಾದ ವಂತಿಕೆ ವಿವರ ಹಾಗೂ ನೋಂದಣಿಯ ಕೊನೆಯ ದಿನಾಂಕದ ವಿವರ ಇಂತಿದೆ. ಹಿಂಗಾರು ಹಂಗಾಮಿನ ಕಡಲೆ (ಮಳೆಯಾಶ್ರಿತ) ಬೆಳೆಗೆ ಪ್ರತಿ ಎಕರೆಗೆ ರೈತರು 210.95 ರೂ. ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ 2025ರ ಡಿಸೆಂಬರ್ 1 ಕೊನೆಯ ದಿನವಾಗಿದೆ.

ಹಿಂಗಾರು ಹಂಗಾಮಿಗೆ ಕಡಲೆ (ನೀರಾವರಿ) ಬೆಳೆಗೆ ಪ್ರತಿ ಎಕರೆಗೆ ರೈತರು 233.71 ರೂ. ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ 2025ರ ಡಿಸೆಂಬರ್ 15 ರಂದು ಕೊನೆಯ ದಿನವಾಗಿದೆ. ಜೋಳ (ಮಳೆಯಾಶ್ರಿತ) ಬೆಳೆಗೆ ಪ್ರತಿ ಎಕರೆಗೆ ರೈತರು 232.20 ರೂ. ವಂತಿಗೆ ಪಾವತಿಸಬೇಕು. ಜೋಳ (ನೀರಾವರಿ) ಬೆಳೆಗೆ ಪ್ರತಿ ಎಕರೆಗೆ ರೈತರು 274.79 ರೂ. ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ 2025ರ ಡಿಸೆಂಬರ್ 1 ರಂದು ಕೊನೆಯ ದಿನವಾಗಿದೆ.

ಹಿಂಗಾರು ಹಂಗಾಮಿನ ಗೋಧಿ (ಮಳೆಯಾಶ್ರಿತ) ಬೆಳೆಗೆ ಪ್ರತಿ ಎಕರೆಗೆ 195.85 ರೂ. ರೈತರ ವಂತಿಕೆ ಪಾವಸತಿಬೇಕು. ಗೋಧಿ (ನೀರಾವರಿ) ಬೆಳೆಗೆ ಪ್ರತಿ ಎಕರೆಗೆ ರೈತರು 294.42 ರೂ. ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ 2025ರ ಡಿಸೆಂಬರ್ 31 ಕೊನೆಯ ದಿನವಾಗಿದೆ. ಕುಸುಬೆ (ಮಳೆಯಾಶ್ರಿತ) ಬೆಳೆಗೆ ಪ್ರತಿ ಎಕರೆಗೆ ರೈತರು 188.19 ರೂ. ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ 2025ರ ಡಿಸೆಂಬರ್ 1 ರಂದು ಕೊನೆಯ ದಿನವಾಗಿದೆ.

ಬೇಸಿಗೆ ಹಂಗಾಮಿನ ಭತ್ತ (ನೀರಾವರಿ) ಬೆಳೆಗೆ ಪ್ರತಿ ಎಕರೆಗೆ ರೈತರು 566.07 ರೂ. ವಂತಿಕೆ ಪಾವತಿಸಬೇಕು. ನೆಲಗಡಲೆ (ನೀರಾವರಿ) ಬೆಳೆಗೆ ಪ್ರತಿ ಎಕರೆಗೆ ರೈತರು 399.29 ರೂ. ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ 2026 ಫೆಬ್ರವರಿ 27 ರಂದು ಕೊನೆಯ ದಿನವಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯವು ಭರದಿಂದ ಸಾಗಿದ್ದು, ಬಿತ್ತನೆ ಪೂರ್ವ ದಿಂದ ಕೊಯ್ಲಿನ ನಂತರದವರೆಗೆ ಅನಿರೀಕ್ಷಿತ ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆನಷ್ಟದಿಂದ ರೈತರನ್ನು ರಕ್ಷಿಸಲು ಮತ್ತು ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪಗಳು ಹಾಗೂ ಯಾವುದೇ ಹಂತದಲ್ಲಿ ಬೆಳೆನಾಶವಾಗಬಹುದಾಗಿದ್ದು, ಆದ್ದರಿಂದ ರೈತರು ಬಿತ್ತನೆ ಕಾರ್ಯಕೈಗೊಳ್ಳುವುದು ಅಲ್ಲದೆ, ಬಿತ್ತಿದ ಬೆಳೆಯ ಕ್ಷೇತ್ರವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ವ್ಯಾಪ್ತಿಗೆ ನೊಂದಾಯಿಸುವುದು ಸಹ ಪ್ರಮುಖವಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಂಬಂಧಪಟ್ಟ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News