ಕಲಬುರಗಿ ಜಿಲ್ಲಾ ಕ್ರಿಶ್ಚಿಯನ್ ಸಮುದಾಯದಿಂದ ಸಂಜಯ್ ಜಾಗಿರದಾರ್‌ಗೆ ಸನ್ಮಾನ
ಕಲಬುರಗಿ : ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಸಂಜಯ್ ಜಾಗಿರದಾರ್ ಅವರಿಗೆ ಕಲಬುರಗಿ ಜಿಲ್ಲಾ ಕ್ರಿಶ್ಚಿಯನ್ ಸಮುದಾಯದಿಂದ ಸನ್ಮಾನಿಸಿ ಸ್ವಾಗತಿಸಲಾಯಿತು.
ನಗರದ ಅಲ್ಪಸಂಖ್ಯಾತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾದ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಸಂಜಯ್ ಜಾಗಿರದಾರ್ ಅವರನ್ನು ಜಿಲ್ಲಾ ಕ್ರಿಶ್ಚಿಯನ್ ಸಮುದಾಯ ಮುಖಂಡರು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ನಾವೆಲ್ಲರೂ ಪಣ ತೊಡಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದು ಸಮುದಾಯದ ಉನ್ನತಿಕರಣಕ್ಕೆ ಶ್ರಮಿಸೋಣಾ ಎಂದು ಕರೆ ನೀಡಿದರು.
ಕಲಬುರಗಿ ಕ್ರಿಶ್ಚಿಯನ್ ಸಮುದಾಯದ ಮುಖಂಡ ಸಂಧ್ಯಾರಾಜ್ ಅವರು ಮಾತನಾಡಿದರು.
ಸಮಾರಂಭದಲ್ಲಿ ಕೆಎಂಡಿಸಿ ಜಿಲ್ಲಾಧಿಕಾರಿ ರವಿ ಬೈರೆ, ಕಾಂಗ್ರೆಸ್ ಮುಖಂಡ ಶ್ಯಾಮ ನಾಟೇಕರ್, ಫಾಸ್ಟರ್ ಶಿರೋಮಣಿ, ಫಾಸ್ಟರ್ ಪರಶುರಾಮ, ಫಾಸ್ಟರ್ ಸತ್ಯನಂದ ಸೇರಿದಂತೆ ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಗಳು, ಚರ್ಚ್ ಫಾದರ್ ಹಾಗೂ ಸಮುದಾಯದ ಅಧಿಕಾರಿಗಳು ಭಾಗವಹಿಸಿದ್ದರು.