×
Ad

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಜೂಜಾಟದ ವೀಡಿಯೊ ವೈರಲ್!

Update: 2025-12-31 16:10 IST

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಹಲವು ಅಕ್ರಮಗಳ ಅಡ್ಡೆಯಾಗಿರುವ ಕುರಿತಾದ ವಿಡಿಯೋಗಳು ಒಂದೊಂದಾಗಿ ಹೊರಬೀಳುತ್ತಿವೆ, ಇದೀಗ ಕೈದಿಗಳ ಹೈಫೈ ಜೀವನ ನಡೆಸುತ್ತಿರುವ ಎನ್ನಲಾದ ಮತ್ತೊಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೆಲವು ತಿಂಗಳ ಹಿಂದಷ್ಟೇ ಕೈದಿಗಳ ಹೈಫೈ ಜೀವನದ ತುಣುಕುಗಳು, ಜೈಲಾಧಿಕಾರಿಯ ವಿರುದ್ಧ ಪತ್ರ ಬರೆದಿರುವುದು ಸೇರಿದಂತೆ ಜೈಲಿನಲ್ಲಿ ಹಲವು ಘಟನೆಗಳ ಕುರಿತಾದ ವೀಡಿಯೊಗಳು ಹರಿದಾಡಿದ್ದವು. ಇದಾದ ಬಳಿಕ ಮಂಗಳವಾರವಷ್ಟೇ ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್, ಜಿಲ್ಲಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ವೀಡಿಯೊ ವೈರಲ್ ಆಗಿತ್ತು. ಇದಾದ ಮರುದಿನವೇ ಬುಧವಾರ ಬೆಳಗ್ಗೆ ಜೈಲಿನಲ್ಲಿ ಕೈದಿಗಳು ನಡೆಸುತ್ತಿರುವ ಜೂಜಾಟ, ಮದ್ಯಪಾನ, ಸಿಗರೇಟ್ ಸೇದುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಕಲಬುರಗಿ ಜೈಲು ಎಂದರೆ ಇತ್ತೀಚೆಗೆ ಅಕ್ರಮಗಳು ಬಯಲಾಗುವ ಪರಪ್ಪನ ಅಗ್ರಹಾರ ಜೈಲಿಗೂ ಮೀರಿಸುವ ಕೇಂದ್ರವಾಗಿ ಬೆಳೆಯುತ್ತಿದೆ. ಇಂತಹ ಅಕ್ರಮಗಳ ಅಡ್ಡೆಯಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಜೈಲಿನಲ್ಲೇ ಹಲವು ಅಕ್ರಮಗಳು ನಡೆಯುತ್ತಿದ್ದರೂ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News