×
Ad

ಕಲಬುರಗಿ | ಮಾಜಿ ಸಚಿವ ದಿ. ಖಮರ್ ಉಲ್ ಇಸ್ಲಾಂ ಅವರ ಸಹೋದರಿ ಸಬಿಯಾ ಆಪಾ ನಿಧನ

Update: 2025-12-31 17:12 IST

ಕಲಬುರಗಿ: ಮಾಜಿ ಸಚಿವ ದಿ. ಖಮರ್ ಉಲ್ ಇಸ್ಲಾಂ ಅವರ ಹಿರಿಯ ಸಹೋದರಿ ಸಬಿಯಾ ಆಪಾ (85) ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಝ್ ಫಾತಿಮಾ ಅವರ ನಾದಿನಿಯಾಗಿದ್ದ ಸಬಿಯಾ ಆಪಾ ಅವರು ಕಲಬುರಗಿಯ ಎಲ್ಲಾ ಸಮುದಾಯದ ಜನರೊಂದಿಗೆ ಬಾಂಧವ್ಯ ಹೊಂದಿದ್ದರು. ಕಲಬುರಗಿಯ ಬಹುತೇಕರು ಇವರನ್ನು ಸಬಿಯಾ "ಆಪಾ" ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಇಬ್ಬರು ಗಂಡು ಮತ್ತು 4 ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಗುರುವಾರ ಸ್ಟೇಷನ್ ಬಜಾರ್ ಮಸೀದಿಯಲ್ಲಿ ನಮಾಝ್ ಎ ಜನಾಝಾದ ನಂತರ ಜಿಲ್ಲಾ ನ್ಯಾಯಾಲಯದ ಹಿಂಭಾಗದಲ್ಲಿ ಇರುವ ಕಲಂದರ್ ಖಾನ್ ಕಬ್ರಿಸ್ತಾನ್ ನಲ್ಲಿ ಅಂತಿಮ ಸಂಸ್ಕಾರ ನೇರವೆರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News