×
Ad

ಶಾಲಾ ಕಲಿಕಾ ಸ್ಪರ್ಧೆಗಳು ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಹಕಾರಿ: ಸತ್ಯನಾರಾಯಣ

Update: 2025-02-19 21:15 IST

ಕಲಬುರಗಿ: ಅಂತರ ಶಾಲಾ ಶೈಕ್ಷಣಿಕ ಕಲಿಕಾ ಸ್ಪರ್ಧೆಗಳು ವಿದ್ಯಾರ್ಥಿಗಳನ್ನು ಪ್ರದರ್ಶನ ನೀಡಲು, ಉತ್ತಮ ಸಾಧನೆ ಮಾಡಲು ಮತ್ತು ಆತ್ಮವಿಶ್ವಾಸವನ್ನು ಗಳಿಸಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಹಾಬಾದ ಸಿ ಆರ್ ಪಿ ಸತ್ಯನಾರಾಯಣ ರವರು ಹೇಳಿದರು.

ಅವರು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಆಯೋಜಿಸಿದ್ದ 2025 ರ ಅಂತರ ಶಾಲಾ ಶೈಕ್ಷಣಿಕ ಕಲಿಕಾ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿರುವ, ಇದು ನಿಜಕ್ಕೂ ಕಲಿಕೆಯ ನಿಜವಾದ ಆಚರಣೆಯಾಗಿದೆ, ಇಲ್ಲಿ ಯಾವುದೇ ನಾಟಕ ವಾಗಲಿ, ನೃತ್ಯವಾಗಲಿ, ಫ್ಯಾಷನ್ ಶೋ ಆಯೋಜಿಸಿಲ್ಲದಿರುವದೆ ಶೈಕ್ಷಣಿಕ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಗುರು ಅಲೀಮಾ ಜಾನ್ ಮಾತನಾಡಿ, ಶಾಲೆಗಳ ವಿವಿಧ ಕೌಶಲ್ಯ ಮತ್ತು ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಹೆಚ್ಚಾಗಿ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ದಂತಾಗುತ್ತದೆ, ಅಂತರ ಶಾಲಾ ಕಲಿಕಾ ಸ್ಪರ್ಧೆಯು ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಮತ್ತು ಶೈಕ್ಷಣಿಕ ಸ್ಪರ್ಧೆ ಹಾಗೆ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ವೇದಿಕೆ ಮೇಲೆ ಪ್ರಾಚಾರ್ಯ ನಾನಾಗೌಡ ಹಿಪ್ಪರಗಿ, ಉಪನ್ಯಾಸಕ ಪೀರ ಪಾಷ, ನಾಗೇಂದ್ರ ಬೇಲೂರು, ಈರಣ್ಣ ಇಟಗಿ ಇದ್ದರು. ನಗರದ ಅಂತರ ಶಾಲಾ ಕಲಿಕಾ ವಿವಿಧ ಸ್ಪರ್ಧೆಗಳಾದ ಭಾಷಣ ಸ್ಫರ್ಧೆ, ಪ್ರಬಂಧ ಸ್ಪರ್ಧೆ, ಬರವಣಿಗೆ ಸುಧಾರಣೆ ಮತ್ತು ರಸ ಪ್ರಶ್ನೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು, ನಗರದ 10 ಪ್ರೌಢ ಶಾಲೆಗಳ 60 ವಿದ್ಯಾರ್ಥಿಗಳು ಕಲಿಕಾ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.

ಶಾಲೆಯ ಚೇರ್ಮನ್ ಅನಿಲ ಜೋಸೆಫ್ ಜಾನ್, ರಾಕೇಶ ಬನಸೋಡೆ, ವಿಲ್ಸನ್ ಮಾರಿಷ, ಶಗುಪ್ತ, ಸಂಗೀತಾ ಸಜ್ಜನ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಾರ್ವತಿ ಸ್ವಾಗತಿಸಿದರು. ಸ್ಟೇಫಿ ನಿರೂಪಿಸಿದರು. ಆಶ್ಮಾ ಖಾನಂ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News