ಸೇಡಂ| ಗ್ರಂಥಪಾಲಕಿ ದಿ.ಭಾಗ್ಯವಂತಿ ನಿವಾಸಕ್ಕೆ ಭೇಟಿ ನೀಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ
Update: 2025-10-19 17:42 IST
ಕಲಬುರಗಿ: ಕೆಲ ದಿನಗಳ ಹಿಂದೆ ಸೇಡಂ ತಾಲೂಕಿನ ಮಳಖೇಡ ಪಂಚಾಯತ್ ಗ್ರಂಥಪಾಲಕಿ ಭಾಗ್ಯವಂತಿ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಮಳಖೇಡದಲ್ಲಿನ ಅವರ ನಿವಾಸಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಭಾಗ್ಯವಂತಿ ಪತಿ ಹಾಗೂ ಮಕ್ಕಳಿಗೆ ಸಾಂತ್ವನ ತಿಳಿಸಿ, ವಯಕ್ತಿಕ ಧನಸಹಾಯವನ್ನು ಮಾಡಿದರು. ಜೊತೆಗೆ ಪಂಚಾಯತ್ ವತಿಯಿಂದ ನೀಡಬೇಕಾದ ಸವಲತ್ತುಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.