×
Ad

ದೇಶ ಕಂಡ ಅಪ್ರತಿಮ ವೀರ ಶಿವಾಜಿ ಮಹಾರಾಜ : ಸುಧೀಂದ್ರ ಇಜೇರಿ

Update: 2025-02-19 22:47 IST

ಕಲಬುರಗಿ: ತಮ್ಮ ಆಡಳಿತಾವಧಿಯಲ್ಲಿ ಸರ್ವ ಜನರಿಗೂ ಜಾತಿ, ಧರ್ಮದ ಬೇಧವಿಲ್ಲದೆ ಸಮಾನ ಆಧ್ಯತೆಯನ್ನು ನೀಡುತ ಜನಪರವಾದ ಆಡಳಿತ ನಡೆಸಿದ ದೇಶ ಕಂಡ ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಾಹಾರಜರು ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುಧೀಂದ್ರ ಇಜೇರಿ ಅಭಿಮತಪಟ್ಟರು.

ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಚತ್ರಪತಿ ಶಿವಾಜಿ ಮಾಹಾರಾಜರ 395 ಜಯಂತಿ ಕಾರ್ಯಕ್ರಮವನ್ನುದ್ದೆಶಿಸಿ ಸುಧೀಂದ್ರ ಇಜೇರಿ ಮಾತನಾಡಿ ಶಿವಾಜಿ ಮಾಹಾರಾಜರ ಜೀವನ ಚರಿತ್ರೆಯನ್ನ ಪ್ರತಿಯೋಬ್ಬರು ಓದಲೇಬೇಕು. ಸ್ವಾಭಿಮಾನಿ ರಾಷ್ಟ್ರ ನೀರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರ ಧೈರ್ಯ ಮತ್ತು ದೇಶಭಕ್ತಿ ನಮ್ಮ ಯುವಜನ ಅರಿಯಬೇಕು. ಅಪ್ರತಿಮ ವೀರ ಹಾಗೂ ಯುದ್ಧ ಚತುರನಾಗಿದ್ದರು ಎಂದರು.

ಈ ಸಂದರ್ಭದಲ್ಲಿ ತಾಲೂಕ ದಂಡಾಧೀಕಾರಿ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಧೀಕಾರಿ ಶಂಭುಲಿಂಗ ದೇಸಾಯಿ, ಪುರಸಭೆ ಅಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ್, ಜಟ್ಟೆಪ್ಪ ಮಂದ್ರವಾಡ, ಮಲ್ಲಿಕಾರ್ಜುನ ಭಜಂತ್ರಿ, ಚಂದನ ಮಹೇಂದ್ರಕರ್, ಸಂಗಣ್ಣಗೌಡ ರದ್ದೆವಾಡಗಿ, ರಾಜು ತಳವಾರ, ವೇಂಕಠರಾವ ಆಂದೋಲ, ಸತೀಶ ಜಾಗಿರ್ದಾರ, ಸಿದ್ದಣ್ಣ, ಶಿವಣ್ಣಗೌಡ, ಶರಣು ಗುತ್ತೆದಾರ, ಮರೆಪ್ಪ ಸರಡಗಿ, ರವಿ, ಸಂತೋಷ ಸಂಗಮ, ಲಕ್ಷ್ಮೀಕಾಂತ ಸಾಸನೂರ, ಸಾಯಬಣ್ಣ ಕಲ್ಯಾಣಕರ್, ವಿಶ್ವ ಆಲೂರ, ದೇವಿಂದ್ರ ಬಡಿಗೇರ, ಭಿಮು ಬಡಿಗೇರ, ಪ್ರಕಾಶ ಮಾರಡಗಿ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News