ರಾಜ್ಯದಲ್ಲಿ ತಾಪಮಾನ ಏರಿಕೆ : ಕಲಬುರಗಿಯಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲು
Update: 2025-02-07 21:32 IST
ಬೆಂಗಳೂರು : ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ತಾಪಮಾನ ಏರಿಕೆಯಾಗಿದ್ದು, ಶುಕ್ರವಾರ(ಫೆ.7) ಕಲಬುರಗಿಯಲ್ಲಿ ಗರಿಷ್ಟ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಾವಣಗೆರೆಯಲ್ಲಿ ಕನಿಷ್ಟ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು 31, ಬಾಗಲಕೋಟೆ 36, ಧಾರವಾಡ 33, ಗದಗ 34, ರಾಯಚೂರು 34, ಮಂಡ್ಯ 33, ಮಂಗಳೂರು 35, ಬೆಳಗಾವಿ 33, ಹಾಸನ 31, ದಾವಣಗೆರೆ 34, ಚಾಮರಾಜನಗರ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.