ಕಲಬುರಗಿ | ಟ್ರಾಕ್ಟರ್ ಕಾರು ಢಿಕ್ಕಿ: ಸ್ಥಳದಲ್ಲೇ ಮಹಿಳೆ ಮೃತ್ಯು
ಕಲಬುರಗಿ: ಕಬ್ಬು ತುಂಬಿದ ಟ್ರಾಕ್ಟರ್ ಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದು, ಕಾರು ಮೂವರು ಗಾಯಗೊಂಡಿರುವ ಘಟನೆ ಅಫಜಲಪುರ ತಾಲ್ಲೂಕಿ ಚೌಡಾಪುರ ತಾಂಡದ ಹತ್ತಿರದ ಶಾಲೆ ಹತ್ತಿರ ನಡೆದಿದೆ.
ಕಲಬುರಗಿ ನಗರ ಪ್ರಶಾಂತ ನಗರ ನಿವಾಸಿ ವಿದ್ಯಾ (40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ, ನಿತಿನ್ ಕುಮಾರ್ (42) ಮಕ್ಕಲಾದ್ ವೈಷ್ಣವಿ (15) ಗಂಭೀರ ಗಾಯಗೊಂಡಿದ್ದು, ವೇದಾಂತ (10) ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಚೌಡಾಪುರ ತಾಂಡಾದ ಸಮೀಪವಿರುವ ಸ್ಕೂಲ್ ಹತ್ತಿರ ಗುಲ್ಬರ್ಗ ಕಡೆಯಿಂದ ಬರುವ ಕಾರು ಕೆಪಿರ್ ಫ್ಯಾಕ್ಟರಿ ಹೋಗುತ್ತಿರುವ ಕಬ್ಬು ತುಂಬಿರುವ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಚನ್ನಯ್ಯ, ಪಿಎಸ್ಐ ರಾಹುಲ್ ಪಾವಡೆ ಪೊಲೀಸ್ ಸಿಬ್ಬಂದಿ ಸಂಗಣ್ಣ ವಾಲೀಕರ್, ಭೀರನ್ನ್ ಪೀರನ್ನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.