ಕಲಬುರಗಿ: ನದಿಯಲ್ಲಿ ಬಟ್ಟೆ ತೊಳೆಯಲು ಹೋದ ಯುವಕ ನೀರುಪಾಲು
Update: 2025-09-20 18:59 IST
ಕಲಬುರಗಿ: ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಯುವಕನೋರ್ವ ನೀರುಪಾಲಾಗಿರುವ ಘಟನೆ ಅಫಜಲಪುರ ತಾಲ್ಲೂಕಿನ ಮಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನದ ನದಿಯ ತಟದಲ್ಲಿ ನಡೆದಿದೆ.
ಮಣೂರ ಗ್ರಾಮದ ನಿವಾಸಿ ಭಾಗೇಶ್ ರೇವಣಸಿದ್ದಪ್ಪ (20) ನೀರುಪಾಲಾದ ಯುವಕ ಎಂದು ತಿಳಿದುಬಂದಿದೆ.
ಸದ್ಯ ನಾಪತ್ತೆಯಾಗಿರುವ ಯುವಕನನ್ನು ಪತ್ತೆ ಹಚ್ಚಲು ಸ್ಥಳಕ್ಕೆ ಅಫಜಲಪುರ ಪೊಲೀಸರು ದೌಡಾಯಿಸಿದ್ದು, ಪೊಲೀಸರು ಸೇರಿದಂತೆ ಸ್ಥಳೀಯರು ಶೋಧ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಅಫಜಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.