×
Ad

ಪುತ್ತೂರು: ಯುವಕನಿಗೆ ಹಲ್ಲೆ, ಜೀವ ಬೆದರಿಕೆ; ಪ್ರಕರಣ ದಾಖಲು

Update: 2023-06-20 23:07 IST

ಪುತ್ತೂರು: ಯುವಕನೋರ್ವನಿಗೆ ಹಲ್ಲೆ ನಡೆಸಿದ ಪ್ರಕರಣ ಮಂಗಳವಾರ ಸಂಜೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷಕಟ್ಟೆ ಎಂಬಲ್ಲಿ ನಡೆದಿದೆ.

ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಹಲ್ಲೆಗೆ ಒಳಗಾದ ಯುವಕ. ಇಲ್ಲಿನ ಇಂದ್ರನಗರ ರಕ್ತೇಶ್ಬರಿ ಕಟ್ಟೆ ಎಂಬಲ್ಲಿನ ನಿವಾಸಿ ಪ್ರವೀಣ್ ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೀಣ್ ಮತ್ತು ಪ್ರವೀಣ್ ಆಚಾರ್ಯ ಇಬ್ಬರೂ ಹಿಂದೆ ಬಿಜೆಪಿಯ ಕಾರ್ಯಕರ್ತರಾಗಿದ್ದರು. ಬಳಿಕದ ಬೆಳವಣಿಗೆ ಯಲ್ಲಿ ಪ್ರವೀಣ್ ಆಚಾರ್ಯ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಇಂದು ಪ್ರವೀಣ್ ಆಚಾರ್ಯ ಅವರ ಮೇಲೆ ಪುರುಷರಕಟ್ಟೆಯಲ್ಲಿ ರಾಜಕೀಯದ ವಿಚಾರ ಮುಂದಿಟ್ಟು ಹಲ್ಲೆ ನಡೆಸಿದ ಪ್ರವೀಣ್ ಬಳಿಕ ಮನೆಯ ಬಳಿಗೆ ಆಗಮಿಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಪ್ರವೀಣ್ ಆಚಾರ್ಯ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News