×
Ad

ವಿಟ್ಲ: ಮನೆಯ ಮೇಲೆ ಆವರಣ ಗೋಡೆ ಬಿದ್ದು ಅಪಾರ ನಷ್ಟ

Update: 2023-07-05 12:02 IST

ವಿಟ್ಲ: ಆವರಣ ಗೋಡೆ ಮನೆಯ ಮೇಲೆ ಬಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆ ವಿಟ್ಲ ಸಮೀಪದ ಚಂದಳಿಕೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಚಂದಳಿಕೆ ನಿವಾಸಿ ಕೃಷ್ಣಪ್ಪ ಮಡಿವಾಳ ಎಂಬವರ ಮನೆಗೆ ಕಾಂಪೌಂಡ್ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಕೃಷ್ಣಪ್ಪ ರವರ ಮನೆಯ ಸಮೀಪ ಸ್ಥಳೀಯ ವ್ಯಕ್ತಿಯೋರ್ವರ ಹಾರ್ಡ್ ವೇರ್ & ಫರ್ನಿಚರ್ ಮಳಿಗೆ ಇದ್ದು, ಅವರು ಭಾರೀ ಮಟ್ಟದ ಎಂ ಸ್ಯಾಂಡ್ ಅನ್ನು ತಡೆಗೋಡೆಗೆ ಒತ್ತಿ ಶೇಖರಣೆ ಮಾಡಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ಎಂ ಸ್ಯಾಂಡ್ ನಲ್ಲಿ ನೀರು ತುಂಬಿ ಅದರ ಭಾರದಿಂದ ರಾತ್ರಿ ವೇಳೆ ಮನೆ ಮೇಲೆ ಕಾಂಪೌಂಡ್ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪಟ್ಟಣ ಪಂಚಾಯತ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗೆ ಅನಾಹುತ ಸಂಭವಿಸಿದರೆ ಸಹಾಯವಾಣಿ ಸಂಖ್ಯೆ 08255239220 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News