×
Ad

ಅಸೈ ಬದ್ರಿಯ ಮದ್ರಸದಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ

Update: 2023-06-30 19:00 IST

ದೇರಳಕಟ್ಟೆ, ಜೂ.೩೦: ಅಸೈ ಬದ್ರಿಯಾ ಮದ್ರಸದ ಎಸ್‌ಬಿವಿ ವತಿಯಿಂದ ಸಮಸ್ತದ ೯೭ನೆ ಸ್ಥಾಪನಾ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ ನಡೆಯಿತು ಸ್ಥಾಪನಾ ದಿನದ ಬಗ್ಗೆ ಮುಸ್ತಫ ಫೈಝಿ ಕಿನ್ಯ ಸಂದೇಶ ನೀಡಿದರು.

ಜಾಬಿರ್ ಫೈಝಿ ವಿಟ್ಲ ದುಆಗೈದರು. ಜಬ್ಬಾರ್ ದಾರಿಮಿ ನಾಟೆಕಲ್ ಭಾಷಣಗೈದರು. ಜಮಾಅತ್ ಕಾರ್ಯದರ್ಶಿ ಮೋನಾಕ, ನಾಸಿರ್ ಅಡ್ಡೂರು ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಅಬ್ದುಲ್ ರಹ್ಮಾನ್ ಫೈಝಿ, ಮುಹಮ್ಮದ್ ಮದನಿ ಕಲ್ಕಟ್ಟ , ಫಾರೂಕ್ ಮುಸ್ಲಿಯಾರ್ ಕಿನ್ಯ, ಆಶಿಂ, ಇಬ್ರಾಹಿಂ, ಸಯ್ಯಿದ್, ಯೂಸುಫ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಎಸ್‌ಬಿವಿ ವತಿಯಿಂದ ಸಮಸ್ತ ಕ್ವಿಝ್ ಪುಸ್ತಕ ನೀಡಿ ಪ್ರೋತ್ಸಾಹಿಸಲಾಯಿತು. ಶಮ್ಮಾಝ್ ಸ್ವಾಗತಿಸಿದರು. ತಂಝೀಲ್ ಹುಸೈನ್ ವಂದಿಸಿದರು. ಮಿಸ್ಬಾ ಹಾಗೂ ಮಾರೂಫ್ ಅಬ್ಬಾಸ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News