×
Ad

ವ್ಯವಹಾರದಲ್ಲಿ ವಂಚನೆ ಆರೋಪ : ಪ್ರಕರಣ ದಾಖಲು

Update: 2023-07-14 22:17 IST

ಮಂಗಳೂರು, ಜು.14: ನಗರದ ಬಂದರ್‌ನಲ್ಲಿ ವಿತರಣಾ ವ್ಯವಹಾರ ಹೊಂದಿರುವ ಪ್ರಾಂಕ್ ರೋಡ್ರಿಗಸ್ ಎಂಬವರಿಗೆ ಜೀವನ್ ಕೋಟ್ಯಾನ್ ಎಂಬಾತ 3.62 ಲಕ್ಷ ರೂ. ವಂಚಿಸಿರುವ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಂಕ್ ರೋಡ್ರಿಗಸ್‌ಗೆ ಸೇರಿದ ಗೂಡ್ಸ್ ಟೆಂಪೊದಲ್ಲಿ ಆರೋಪಿ ಜೀವನ್ ಕೋಟ್ಯಾನ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. 2014ರ ಆ.1ರಿಂದ 2022ರ ಜು.30ರವರೆಗೆ ಸರಕು ವಿತರಣಾ ಮಾರಾಟ ನಿರ್ವಹಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತನ್ನ ನಂಬಿಕೆಯ ಲಾಭ ಪಡೆದುಕೊಂಡ ಆರೋಪಿಯು ಮಾರಾಟ ವಿಭಾಗದಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 3.47 ಲಕ್ಷ ರೂ. ವಂಚಿಸಿದ್ದಾನೆ. ಅಲ್ಲದೆ 15,000 ರೂ. ವೈಯಕ್ತಿಕ ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ತಪ್ಪನ್ನು ಒಪ್ಪಿಕೊಂಡು ಒಂದು ವರ್ಷದೊಳಗೆ ಸಂಪೂರ್ಣ ಮೊತ್ತ ನೀಡುವುದಾಗಿ ತಿಳಿಸಿದ್ದ. ಜೂ.30ರಂದು ಯಾವುದೇ ಮಾಹಿತಿ ಅಥವಾ ಸೂಚನೆ ನೀಡದೆ ಕೆಲಸ ಬಿಟ್ಟು ಹೋಗಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News