×
Ad

ಕಲಾವಿದ ಮುಡಿಪು ಕೃಷ್ಣ ನಿಧನ

Update: 2023-07-02 21:07 IST

ಉಡುಪಿ, ಜು.2: ಯಕ್ಷಗಾನ ಸ್ತ್ರೀವೇಷಧಾರಿಯಾಗಿ, ಗುರುಗಳಾಗಿ ಸುದೀರ್ಘ ಸೇವೆ ಸಲ್ಲಿಸಿದ ಮುಡಿಪು ಕೃಷ್ಣ (78) ಜು.1ರಂದು ನಿಧನರಾದರು.

ವೇಣೂರು, ಸುಂಕದಕಟ್ಟೆ, ಇರಾ, ಕಟೀಲು, ಕೂಡ್ಲು, ಬಪ್ಪನಾಡು, ಭಗವತಿ ಮೇಳಗಳಲ್ಲಿ ಎರಡು ದಶಕಗಳ ಕಾಲ ತಿರುಗಾಟ ಮಾಡಿ, ಚಿಕ್ಕಮೇಳ ಸ್ಥಾಪಿಸಿ 35 ವರ್ಷಗಳ ಕಾಲ ಮುನ್ನಡೆಸಿ ಹಲವು ಯಕ್ಷಗಾನ ಕಲಾವಿದರನ್ನು ಸಿದ್ಧಪಡಿಸಿದರು.

ಇವರು ಯಕ್ಷಗಾನ ಕಲಾವಿದರಾದ ಪುತ್ರ ಕುಸುಮಾಕರ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News