×
Ad

ಸಾಮಾಜಿಕ ಕಾರ್ಯಕರ್ತೆಗೆ ಹಲ್ಲೆ: ಆರೋಪ

Update: 2023-07-03 19:57 IST

ಮಂಗಳೂರು, ಜು.3: ನಗರದಲ್ಲಿ ಪ್ರಾಣಿ-ಪಕ್ಷಿಗಳನ್ನು ರಕ್ಷಿಸಿ ಆರೈಕೆ ಮಾಡುತ್ತಿರುವ ಬಲ್ಲಾಳ್‌ಭಾಗ್ ನಿವಾಸಿ ರಜನಿ ಶೆಟ್ಟಿಯ ಮೇಲೆ ನೆರೆಮನೆಯ ಮಹಿಳೆಯೊಬ್ಬರು ಹಲ್ಲೆ ನಡೆಸಿರುವುದಾಗಿ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಮವಾರ ಬೆಳಗ್ಗೆ ತಾನು ಬಟ್ಟೆ ಒಣಗಲು ಹಾಕುತ್ತಿದ್ದಾಗ ಮಹಿಳೆ ಕಲ್ಲು ಎಸೆದಿದ್ದಾರೆ. ಇದರಿಂದ ತನಗೆ ಗಾಯವಾಗಿದೆ ಎಂದು ರಜನಿ ಶೆಟ್ಟಿ ದೂರಿನಲ್ಲಿ ತಿಳಿಸಿದಾರೆ.

ಮಹಿಳೆಯು ಕೆಲವು ಸಮಯದಿಂದ ಹಲ್ಲೆಗೆ ಪ್ರಯತ್ನ ನಡೆಸುತ್ತಿದ್ದರು. ನಾಯಿ, ಬೆಕ್ಕುಗಳಿಗೂ ಥಳಿಸಿದ್ದಾರೆ ಎಂದು ರಜನಿ ಶೆಟ್ಟಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News