×
Ad

ರ‍್ಯಾಂಕ್ ವಿಜೇತ ವೈದ್ಯೆಗೆ ಸನ್ಮಾನ

Update: 2023-07-07 21:55 IST

ಮಂಗಳೂರು: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ನಡೆಸಿದ ಎಂಬಿಬಿಎಸ್ ಪದವಿಯಲ್ಲಿ ಫಿಸಿಯೋಲಜಿ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮುಕ್ಕ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಮೈತ್ರಿ ಅವರನ್ನು ಶಿವಳ್ಳಿ ಸ್ಪಂದನ ಕದ್ರಿ ವಲಯ ವತಿಯಿಂದ ಸನ್ಮಾನಿಸಲಾಯಿತು. 

ಕದ್ರಿ ವಲಯಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಮಹಿಳಾ ಘಟಕಾಧ್ಯಕ್ಷೆ ರಮಾಮಣಿ ಭಟ್, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ, ಪದಾಧಿಕಾರಿಗಳಾದ ಸುಧಾಕರ ಭಟ್ ಆರೂರು, ಗೀತಾ ಬೆಳ್ಳೆ, ಸುಧಾ ಪ್ರಸಾದ್, ಜಯಲಕ್ಷ್ಮೀ ರಾವ್, ಸದಾನಂದ ಪೇಜಾವರ, ಉಮಾಲತಾ ಜಿ.ತಂತ್ರಿ, ಹೆತ್ತವರಾದ ರಾಜೇಂದ್ರ, ಸಂಧ್ಯಾ ಮತ್ತು ಅಜ್ಜ ವಿಠಲದಾಸ ರಾವ್, ಅಜ್ಜಿ ಲೀಲಾ ವಿ.ರಾವ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News