×
Ad

ಪುಂಜಾಲಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ‘ಈದುಲ್ ಅಝ್ಹಾ’ ಆಚರಣೆ

Update: 2023-06-29 20:57 IST

ಪುಂಜಾಲಕಟ್ಟೆ. ಜೂ.29. ದೇಶದೆಲ್ಲೆಡೆ ಇಂದು (ಗುರುವಾರ) ಸಂಭ್ರಮದ ಬಕ್ರೀದ್ ಹಬ್ಬ ಆಚರಿಸುತ್ತಿದ್ದು, ಪುಂಜಾಲಕಟ್ಟೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಬೆಳಗ್ಗೆ 8 ಗಂಟೆಗೆ ಈದ್ ನಮಾಝ್ ನೆರವೇರಿಸಲಾಯಿತು.

ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಸಹಾಯಕ ಖತೀಬರಾದ ಮಜೀದ್ ದಾರಿಮಿ, ಬಕ್ರೀದ್ ಹಬ್ಬದ ತ್ಯಾಗ ಬಲಿದಾನದ ಮಹತ್ವದ ಬಗ್ಗೆ ಸಂದೇಶ ನೀಡಿ ಖುತುಬಾ ನೆರವೇರಿಸಿದರು. ಬಹು ಇಕ್ಬಾಲ್ ಅಝ್ಹರಿ ನಮಾಝ್ ಗೆ ನೇತೃತ್ವ ನೀಡಿದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News