ತಲಪಾಡಿ : ಬಾರ್ ಗೆ ನುಗ್ಗಿ ಕಳವು; ಪ್ರಕರಣ ದಾಖಲು
Update: 2023-07-05 22:00 IST
ಉಳ್ಳಾಲ: ತಲಪಾಡಿಯ ಮರೋಳಿ ಬಾರ್ ಗೆ ನುಗ್ಗಿ 2 ಲಕ್ಷ ನಗದು ಹಾಗೂ ಬಾಟಲಿಗಳನ್ನು ಕಳವುಗೈದಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರೋಳಿ ಬಾರ್ ನ ಶೌಚಾಲಯದ ಕಿಟಕಿ ಮೂಲಕ ಒಳನುಗ್ಗಿ, ಬಾಗಿಲನ್ನು ಮುರಿದು ಕ್ಯಾಷಿನಲ್ಲಿರಿಸಲಾಗಿದ್ದ ರೂ.2 ಲಕ್ಷ ನಗದು ಕಳವುಗೈದಿದ್ದಾನೆ. ಜೊತೆಗೆ ಕೆಲವು ಬಾಟಲಿಗಳನ್ನು ಕಳವು ನಡೆಸಿದ್ದಾನೆ. ಬಾರ್ ಒಳಗಡೆ ವಿಚಾರ ತಿಳಿದಿರುವ ವ್ಯಕ್ತಿಯೇ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ. ಘಟನೆ ಕುರಿತು ಬಾರ್ ಮಾಲಕ ಸುನಿಲ್ ಮರೋಳಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.