×
Ad

ಜು.14ರಂದು ಪ್ಯಾರಿಸ್‌ನಲ್ಲಿ Bastille Day ಪೆರೇಡ್: ಮಂಗಳೂರಿನ ಲೆ. ಕಮಾಂಡ್ ದಿಶಾ ಅಮೃತ್ ಭಾಗಿ

Update: 2023-07-08 20:27 IST

ಲೆ.ಕಮಾಂಡರ್ ದಿಶಾ ಅಮೃತ್

ಮಂಗಳೂರು, ಜು. 8: ಗಣರಾಜ್ಯೋತ್ಸವ ದಿನದಂದು ಭಾರತೀಯ ನೌಕಾಪಡೆ ತುಕಡಿಯನ್ನು ಮುನ್ನಡೆಸಿದ್ದ ಮಂಗಳೂರು ಮೂಲದ ಲೆ.ಕಮಾಂಡರ್ ದಿಶಾ ಅಮೃತ್ ಅವರು ಜು. 14ರಂದು ಫ್ರಾನ್ಸ್‌ನಲ್ಲಿ ನಡೆಯಲಿರುವ Bastille Day ಪೆರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

Bastille Day ಪೆರೇಡ್ ಫ್ರಾನ್ಸ್‌ನ ಪ್ಯಾರಿಸ್ ನಗರದಲ್ಲಿ ನಡೆಯಲಿದೆ.

ಭಾರತೀಯ ನೌಕಾಪಡೆಯ ತಂಡವು ಈಗಾಗಲೇ ಪ್ಯಾರಿಸ್ ತಲುಪಿದ್ದು, ತಂಡದಲ್ಲಿ ನಾಲ್ವರು ಅಧಿಕಾರಿಗಳು ಮತ್ತು 64 ನಾವಿಕರು ಇದ್ದಾರೆ. ಪೆರೇಡ್‌ನಲ್ಲಿ ಭಾರತೀಯ ತುಕಡಿಯನ್ನು ಕಮಾಂಡರ್ ವೃತ್ ಬಾಘೇಲ್ ಮುನ್ನಡೆಸಲಿದ್ದು, ಇವರೊಂದಿಗೆ ಲೆ.ಕ. ದಿಶಾ ಅಮೃತ್, ಲೆ.ಕ. ರಜತ್ ತ್ರಿಪಾಠಿ ಹಾಗೂ ಲೆ.ಕ. ಜಿತ್ತಿನ್ ಲಲಿತಾ ಧರ್ಮರಾಜ್ ಭಾಗವಹಿಸಲಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News