×
Ad

ಬಿ.ಸಿ.ರೋಡ್ : ಎಸ್ಸೆಸ್ಸೆಫ್ ಸೆನ್ಸೋರಿಯಂ ಮುತಅಲ್ಲಿಂ ಕಾನ್ಫರೆನ್ಸ್, ರ‍್ಯಾಲಿ

Update: 2023-07-02 20:04 IST

ಬಂಟ್ವಾಳ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿ ಗೋಲ್ಡನ್ ಫಿಫ್ಟಿ ಪ್ರಯುಕ್ತ ಹಮ್ಮಿಕೊಂಡ ಸೆನ್ಸೋರಿಯಂ ಮುತಅಲ್ಲಿಂ ಸಮ್ಮೇಳನವು ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂ ನಲ್ಲಿ ಸಮಾರೋಪಗೊಂಡಿತು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಅಧ್ಯಕ್ಷತೆ ವಹಿಸಿದ್ದರು. ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಎಸ್.ಪಿ. ಹಂಝ ಸಖಾಫಿ, ಅನಸ್ ಅಮಾನಿ ಪುಷ್ಪಗಿರಿ, ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಇಸ್ಮಾಯಿಲ್ ಸಅದಿ ಮಾಚಾರ್ ಹಾಗೂ ರಫೀಕ್ ಮಾಸ್ಟರ್ ತರಗತಿ ನಡೆಸಿದರು.

ಕರ್ನಾಟಕ ರಾಜ್ಯ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದ ಬಳಿಕ ಬಿ.ಸಿ. ರೋಡ್ ಜಂಕ್ಷನ್ ಮೂಲಕ ಮುತಅಲ್ಲಿಂ ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ವಿರೋಧಿಸಿ ರ‍್ಯಾಲಿ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News