×
Ad

ಡಾ. ಸವಿತಾ ಕಾಮತ್‌ಗೆ ವೈದ್ಯಕೀಯ ಸೇವೆಗಾಗಿ ಶ್ರೇಷ್ಠ ವೈದ್ಯ ಪ್ರಶಸ್ತಿ

Update: 2023-07-03 22:54 IST

ಭಟ್ಕಳ: ತಾಲೂಕಾ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಗಳಾಗಿ ಉತ್ತಮ ಹಾಗೂ ದಕ್ಷ ಸೇವೆಯಿಂದ ಸರಕಾರಿ ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಿ, ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿ ಮಾಡುವಲ್ಲಿ ಶ್ರಮ ವಹಿಸಿದ ಡಾ. ಸವಿತಾ ಕಾಮತ್ ಅವರು ಮುಖ್ಯ ಮಂತ್ರಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿನ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಟ್ಕಳದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಶ್ರೇಷ್ಠ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಡಾ.ಸವಿತ ಕಾಮತ ಅವರು ಪ್ರತಿದಿನ ಸುಮಾರು 7 ರಿಂದ 8 ಶಸ್ತ್ರಚಿಕಿತ್ಸೆಗಳಲ್ಲಿ ಭಾಗಿಯಾಗಿ ಅರವಳಿಕೆ ತಜ್ಞರ ಜವಾಬ್ದಾರಿ ನಿಭಾಯಿಸುತ್ತಿದ್ದರಲ್ಲದೇ ತಮ್ಮೊಂದಿಗೆ ಇದ್ದ ವೈದ್ಯರುಗಳು ನಿಷ್ಟೆಯಿಂದ ಬಡವರಿಗೆ ಯಾವುದೇ ಹೊರೆಯಾಗದಂತೆ ಚಿಕಿತ್ಸೆ ನೀಡುವಂತೆ ಪ್ರೇರೇಪಿಸಿ ಎಲ್ಲಾ ವೈದ್ಯರಿಂದಲೂ ಗುಣಮಟ್ಟದ ಸೇವೆ ದೊರೆಯುವಂತೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News