×
Ad

ರಾಜೇಂದ್ರ ರಾವ್ ಕಲ್ಬಾವಿಗೆ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ ಪ್ರದಾನ

Update: 2023-06-26 22:47 IST

ಮಂಗಳೂರು ಜೂ.೨೬: ಅಸೋಶಿಯನ್ ಆಫ್ ಕನ್ಸ್‌ಲ್ಟಂಟೆಂಟ್ ಇಂಜಿನಿಯರ್ಸ್‌ (ಇಂಡಿಯಾ) (ಎಸಿಸಿಇ(ಐ) ರಾಷ್ಟ್ರೀಯ ಸಂಸ್ಥೆಯ ರಾಷ್ಟ್ರ ಮಟ್ಟದ ವಾರ್ಷಿಕ ಸಂಸ್ಥಾಪಕರ ದಿನಾಚರಣೆ ಮತ್ತು ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಾಗಪುರ್ ಹೋಟೆಲ್ ರಾಡಿಸನ್ ಬ್ಲೂ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಆಧುನಿಕ ಕಟ್ಟಡ ವಿನ್ಯಾಸ, ಸಂಶೋಧನೆ, ತಂತ್ರಜ್ಞಾನ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ದ.ಕ. ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕ ಇಂಜಿನಿಯರ್ ರಾಜೇಂದ್ರ ರಾವ್ ಕಲ್ಬಾವಿ ಅವರಿಗೆ ರಾಷ್ಟ್ರಮಟ್ಟದ ಶ್ರೇಷ್ಠ ಇಂಜಿನಿಯರ್ - ೨೦೨೩ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಇಂಜಿನಿಯರ್ ವಿಜಯ್ ಕೆ. ಸನಪ್ ಪ್ರದಾನ ಮಾಡಿದರು. ಈ ಸಂದರ್ಭ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಅಶ್ವತ್, ಸಂಸ್ಥೆಯ ಉಪಾಧ್ಯಕ್ಷ ಸಂದೀಪ್ ಶಿರ್‌ಡೆಕರ್, ರಾಜ್‌ಕುಮಾರ್ ಕಚ್ರೆಲಾ, ಪ್ರಧಾನ ಕಾರ್ಯದರ್ಶಿ ವಿಜಯ್ ವಿಷ್ಣು ಮಯ್ಯ, ಕೋಶಾಧಿಕಾರಿ ಆರ್.ಶ್ರೀನಿವಾಸನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News