×
Ad

ಭಟ್ಕಳ: ಮನೆ ಕಳವು ಪ್ರಕರಣ ಬೇಧಿಸಿದ ಪೊಲೀಸರು; ಇಬ್ಬರು ಆರೋಪಿಗಳ ಬಂಧನ

Update: 2023-07-15 23:46 IST

ಭಟ್ಕಳ: ಕಳೆದ ಜೂನ್ 22 ರಂದು ರಾತ್ರಿ ಉದ್ಯಮಿ ರಿಬ್ಕೋ ಸಂಸ್ಥೆಯ ಮಾಲಿಕ ಎಸ್.ಎ ರಹ್ಮಾನ್ ಶಾಬಂದ್ರಿಯವರ ವೆಂಕಟಾಪುರದ ರಿಬ್ಕೋ ಕಾಲೋನಿಯಲ್ಲಿರುವ ಮನೆ ಕಳುವು ಪ್ರಕರಣವನ್ನು ಬೇಧಿಸಿದ ಗ್ರಾಮೀಣ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನಗದು ಸೇರಿದಂತೆ 12 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾಗಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಶನಿವಾರ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳನ್ನು ಗುಳ್ಮಿ ಬೆಳಲಖಂಡದ ನಿವಾಸಿಗಳಾದ ಮುಹಮ್ಮದ್ ಸಾದಿಕ್ (23) ಹಾಗೂ ಮುಝಮ್ಮಿಲ್ (22) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 70 ಗ್ರಾ. ಚಿನ್ನಾಭರಣ, 428000 ರೂ ನಗದು ಹಣ, 376388 ರೂ ಮೌಲ್ಯದ ವಿದೇಶಿ ಕರೆನ್ಸಿ, 1 ಲಕ್ಷ ರೂ ಮೌಲ್ಯದ ಕೈಗಡಿಯಾರ, ಪಾಸ್ ಪೋರ್ಟ್ ಪ್ರತಿ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಹೀಗೆ ಒಟ್ಟು 1204388 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News