×
Ad

ಶಿಕ್ಷಕರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Update: 2023-07-11 20:38 IST

ಬೈಂದೂರು, ಜು.11: ಹಾಡುಹಗಲೇ ಶಿಕ್ಷಕರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಜು.10ರಂದು ಮಧ್ಯಾಹ್ನ ವೇಳೆ ನಡೆದಿದೆ.

ಕಂಬದಕೋಣೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಟಾಕೇಶ ಪಟಗಾರ ಹಾಗೂ ಶಿರೂರು ಜೂನಿಯರ್ ಕಾಲೇಜಿನಲ್ಲಿ ಅಧ್ಯಾಪಕಿ ನಾಗವೇಣಿ ಜಿ.ಪಟಗಾರ ದಂಪತಿ ಮನೆಯ ಮಹಡಿಯ ಹಿಂದಿನ ಬಾಲ್ಕನಿಯ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು ಕಾಪಾಟಿನಲ್ಲಿದ್ದ ಚಿನ್ನದ ಕರಿಮಣಿ ಸರ, 4 ಜೊತೆ ಚಿನ್ನದ ಕಿವಿ ಓಲೆ, ಬೆಳ್ಳಿಯ ಗಣಪತಿ ಮೂರ್ತಿ ಹಾಗೂ ಬೆಳ್ಳಿಯ ಕುಂಕುಮ ಬಟ್ಟಲು, 1,000ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 2,00,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News