×
Ad

ವಿಟ್ಲ: ಕಾರು ಢಿಕ್ಕಿ; ಬೈಕ್‌ ಸವಾರರಿಗೆ ಗಾಯ

Update: 2023-07-12 18:46 IST

ವಿಟ್ಲ: ಕಾರು‌ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಲ್ ಸವಾರ ಗಂಭೀರ ಗಾಯಗೊಂಡ ಘಟನೆ ಕೊಡಂಗಾಯಿ ಮೈತ್ರೆಯಿ ಗುರುಕುಲದ ಬಳಿ ನಡೆದಿದೆ.

ಕಡಂಬು‌ ನಿವಾಸಿಗಳಾದ‌ ಸಿನಾನ್ ಮತ್ತು ಫೈಝಲ್ ಬೈಕ್ ಸವಾರರು ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರೊಬ್ಬನ ತಲೆ ಕಾರಿನ ಗಾಜಿಗೆ ತಾಗಿ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಕಾರು ಚಾಲಕ ಸುಳ್ಯ ಸಮೀಪದ ಕನಕಮಜಲು ನಿವಾಸಿ ಗೋಪಾಲಕೃಷ್ಣ ಅವರು ತನ್ನ ಪುತ್ರಿಯನ್ನು ಮುಡಿಪು ವಸತಿ ಶಾಲೆಗೆ ದಾಖಲಿಸಿ ವಾಪಾಸಾಗುತ್ತಿದ್ದರು. ಸ್ದಳಕ್ಕೆ ವಿಟ್ಲ ಪೊಲೀಸರು ಮತ್ತು ಹೈವೇ ಪೇಟ್ರೋಲ್ ಪೊಲೀಸರು ಆಗಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News