ಇತರ ಧರ್ಮೀಯರ ಭಾವನೆಗೆ ಧಕ್ಕೆಯಾಗದಂತೆ ಬಕ್ರೀದ್ ಆಚರಿಸಿ: ಅಬ್ದುಲ್ ಮುತ್ತಾಲಿ ವಂಡ್ಸೆ
Update: 2023-06-26 20:46 IST
ಉಡುಪಿ, ಜೂ.26: ತ್ಯಾಗ ಬಲಿದಾನದ ಬಕ್ರೀದ್ ಹಬ್ಬದ ಆಚರಣೆ ಮತ್ತು ಧಾರ್ಮಿಕ ಚಟುವಟಿಕೆಯ ಸಂದರ್ಭಗಳಲ್ಲಿ ಪ್ರಾಣಿ ಬಲಿದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮುದಾಯದವರ ಧರ್ಮೀಯವರ ಭಾವನೆಗೆ ಧಕ್ಕೆಯಾಗದಂತೆ ಕಾನೂನಿನ ಚೌಕಟ್ಟಿಗೆ ಒಳಪಟ್ಟಂತೆ ಖುರ್ಬಾನಿ ನೀಡಬೇಕೆಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿ.ಎಚ್.ಅಬ್ದುಲ್ ಮುತ್ತಾಲಿ ವಂಡ್ಸೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಮೌಲಾನ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಉಪಸ್ಥಿತರಿದ್ದರು.