×
Ad

ಡ್ರಗ್ಸ್ ವ್ಯಸನ ಮುಕ್ತಗೊಂಡವರ ಸಮ್ಮಿಲನ ಕಾರ್ಯಕ್ರಮ

Update: 2023-06-25 21:40 IST

ಮಂಗಳೂರು, ಜೂ.25: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಡೆಸಿದ ಕಾರ್ಯಾಚರಣೆಯ ಫಲವಾಗಿ ಡ್ರಗ್ಸ್ ವ್ಯಸನದಿಂದ ಮುಕ್ತಗೊಂಡವರ ಸಮ್ಮಿಲನ ಕಾರ್ಯಕ್ರಮವು ರವಿವಾರ ಆಯುಕ್ತಾಲಯದ ಕಚೇರಿಯಲ್ಲಿ ನಡೆಯಿತು.

ಅನುಮಾನದ ಮೇಲೆ ನಾಲ್ಕು ತಿಂಗಳ ಅವಧಿಯಲ್ಲಿ ಹಲವರನ್ನು ತಪಾಸಣೆಗೊಳಪಡಿಸಲಾಗಿತ್ತು. ಈ ಪೈಕಿ ಪತ್ತೆಯಾದ ಡ್ರಗ್ಸ್ ವ್ಯಸನಿಗಳಿಗೆ ವಿಶೇಷ ಕೌನ್ಸಿಲಿಂಗ್ ನೀಡಲಾಗಿತ್ತು. ಅದರಲ್ಲಿ ಸುಮಾರು 100 ಮಂದಿ ವ್ಯಸನದಿಂದ ಮುಕ್ತರಾಗಿದ್ದರು. ಅವರ ಸಮ್ಮಿಲನ ಕಾರ್ಯಕ್ರಮವನ್ನು ರವಿವಾರ ನಡೆಸಿ ಸಂವಾದ ನಡೆಸಲಾಯಿತು. ಮಾದಕ ದ್ರವ್ಯದ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಲಾಯಿತು ಎಂದು ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಈ ಸಂದರ್ಭ ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News