×
Ad

ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷರಾಗಿ ಡಿ.ಎಂ. ಅಸ್ಲಂ ಆಯ್ಕೆ

Update: 2023-06-25 16:43 IST

ಡಿ.ಎಂ.ಅಸ್ಲಂ

ಮಂಗಳೂರು, ಜೂ.25: ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ವಾರ್ಷಿಕ ಸಭೆ ರವಿವಾರ ನಗರದ ಖಾಸಗಿ ರೆಸ್ಟೋರೆಂಟ್‌ನಲ್ಲಿ ಜರಗಿತು. ಯು.ಆರ್.ಅಕಾಡಮಿಯ ಸ್ಥಾಪಕ ಅಧ್ಯಕ್ಷ ಉಮೇಶ್ ಉಚ್ಚಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.

2023ರಿಂದ 2027ರ ತನಕದ 4 ವರ್ಷದ ಅವಧಿಗೆ ನಡೆದ ಪಧಾದಿಕಾರಿಗಳ ಚುನಾವಣೆಯಲ್ಲಿ ಡಿ.ಎಂ. ಅಸ್ಲಂ ಅಧಿಕ ಮತಗಳಿಂದ ಅಧ್ಯಕ್ಷರಾಗಿ ಚುನಾಯಿತರಾದರು. ಉಪಾಧ್ಯಕ್ಷರಾಗಿ ಬಿ.ಬಿ. ಥೋಮಸ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹುಸೇನ್ ಬೋಳಾರ, ಖಜಾಂಚಿಯಾಗಿ ಫಿರೋಝ್ ಉಳ್ಳಾಲ್ ಅವಿರೋಧವಾಗಿ ಆಯ್ಕೆಯಾದರು.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅನಿಲ್ ಕುಮಾರ್ ಪಿ.ವಿ, ಅಬ್ದುಲ್ ಲತೀಫ್, ಮುಹಮ್ಮದ್ ಮಿಸ್ಬಾ, ಸುಜೀತ್ ಯೆನಪೋಯ, ತಮೀಮ್ ಉಳ್ಳಾಲ್ ಅವಿರೋಧವಾಗಿ ಆಯ್ಕೆಯಾದರು.

ಮರ್ಚಂಟ್ ತಂಡದ ಖಾಲಿದ್, ಬೋಳಾರ ಬ್ರದರ್ಸ್ ತಂಡದ ನಾಸಿರ್, ಅಝಾರಿಯಾ ತಂಡದ ಖಾಲಿದ್ ಕಂದುಕ, ಯುನೈಟೆಡ್ ಉಚ್ಚಿಲ ತಂಡದ ಇಮ್ತಿಯಾಝ್, ಜೆಮ್ ತಂಡದ ಆನಂದ ಶೆಟ್ಟಿ, ಬ್ರದರ್ಸ್ ಉಚ್ಚಿಲ ತಂಡದ ಆರಿಫ್, ಸಂತ ಅಲೋಸಿಯಸ್ ಕಾಲೇಜು ತಂಡದ ಅರುಣ್, ಮಂಗಳೂರು ಯುನೈಟೆಡ್ ತಂಡದ ತಸ್ವರ್, ಮಂಗಳೂರು ಸ್ಪೋರ್ಟಿಂಗ್ ತಂಡದ ಫಯಾಝ್ ಸಭೆಯಲ್ಲಿ ಭಾಗವಹಿಸಿದ್ದರು.

ಬದ್ರಿಯಾ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯೂಸುಫ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News