×
Ad

ಕೊಣಾಜೆ : ಮಿತ್ತಕೋಡಿಯಲ್ಲಿ ಗುಡ್ಡ ಕುಸಿತದ ಆತಂಕ

Update: 2023-07-03 17:23 IST

ಕೊಣಾಜೆ : ಪಜೀರು ಗ್ರಾಮ ವ್ಯಾಪ್ತಿಯ ಕಂಬಳಪದವು ಇನ್ಫೋಸಿಸ್-ಅರ್ಕಾನ-ಮಿತ್ತಕೋಡಿ ಸಂಪರ್ಕದ ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿ ಇರುವ ಗುಡ್ಡ ಪ್ರದೇಶವು ಕುಸಿಯುವ ಹಂತದಲ್ಲಿದೆ.

ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿಯ ಗುಡ್ಡ ಪ್ರದೇಶದ ಬಂಡೆಕಲ್ಲುಗಳು ಕುಸಿಯಲಾರಂಬಿಸಿವೆ. ಕಳೆದ ಮೂರು ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿಯೂ ಇಲ್ಲಿ ಗುಡ್ಡದ ಮಣ್ಣು ಕುಸಿದು ರಸ್ತೆ ಬಂದ್ ಆಗುವುದು ಸಾಮಾನ್ಯವಾಗಿದೆ. ಕಳೆದ ಬಾರಿ ಮಣ್ಣು ಕುಸಿದ ಪರಿಣಾಮ ಅನೇಕ ದಿನಗಳ‌ ಕಾಲ ರಸ್ತೆ ಬಂದ್ ಆಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದೀಗ ಮತ್ತೆ ಗುಡ್ಡದ ಮಣ್ಣು ಕುಸಿಯುವ ಸ್ಥಿತಿಯಲ್ಲಿದ್ದು ಈ ಭಾಗದಲ್ಲಿ ಸಂಚರಿಸುವ ನಾಗರಿಕರು ಆತಂಕದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News