×
Ad

ಮಂಗಳೂರು: ಕೆಲಸದಲ್ಲಿ ಕಮಿಷನ್ ನೀಡುವುದಾಗಿ ನಂಬಿಸಿ ವಂಚನೆ; ದೂರು ದಾಖಲು

Update: 2023-06-24 22:57 IST

ಮಂಗಳೂರು, ಜೂ.24: ಗೂಗಲ್ ರಿವ್ಯೂ ಟಾಸ್ಕ್ ಕೆಲಸದಲ್ಲಿ ಕಮಿಷನ್ ನೀಡುವುದಾಗಿ ನಂಬಿಸಿ 2,07,300ರೂ. ವಂಚನೆಗೈದ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂ.20ರಂದು ಅಪರಿಚಿತ ವ್ಯಕ್ತಿ ದೂರುದಾರರ ಮೊಬೈಲ್ ವಾಟ್ಸಪ್‌ಗೆ ಸಂದೇಶ ಕಳುಹಿಸಿ ಆನ್‌ಲೈನ್‌ನಲ್ಲಿ ಗೂಗಲ್ ರಿವ್ಯೂ ಕೆಲಸ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಆನ್ ಲೈನ್ ಗೂಗಲ್ ರಿವ್ಯೂ ಟಾಸ್ಕ್ ಟೆಲೆಗ್ರಾಂ ಲಿಂಕ್ ಕಳುಹಿಸಿದ್ದಾರೆ ಎನ್ನಲಾಗಿದೆ.

ದೂರುದಾರರು ಈ ಲಿಂಕ್ ಮುಖಾಂತರ ಟೆಲೆಗ್ರಾಂ ಗ್ರೂಪ್ ಸೇರಿದ್ದಾರೆ. ಗ್ರೂಪ್‌ನಲ್ಲಿ ಕಳುಹಿಸಿದ ಗೂಗಲ್ ರಿವ್ಯೂ ಎರಡು ಟಾಸ್ಕ್ ಗಳನ್ನು ಅವರು ಪೂರ್ಣಗೊಳಿಸಿದ್ದರು. ಅಂತೆಯೇ ಒಂದು ಟಾಸ್ಕ್ ಗೆ 150 ರೂ ನಂತೆ ಒಟ್ಟು 300 ರೂ.ಗಳನ್ನು ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. ಬೇರೆ ಬೇರೆ ರೀತಿಯ ಗೂಗಲ್ ರಿವ್ಯೂ ಟಾಸ್ಕ್ ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ಆರೋಪಿಗಳು ತಿಳಿಸಿದರೆನ್ನಲಾಗಿದೆ.

ದೂರುದಾರರು ನಿಜವೆಂದು ನಂಬಿಕೊಂಡು ಆನ್ ಲೈನ್ ಗೂಗಲ್ ರಿವ್ಯೂ ಟಾಸ್ಕ್‌  ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 2,07,300 ರೂ  ಪಾವತಿಸಿದ್ದಾರೆ ಎಂದು ಅವರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News