×
Ad

ಯುಪಿಸಿಎಲ್‌ನಿಂದ ‘ಗೋ-ರೆಡ್’ ರಕ್ತದಾನ ಶಿಬಿರ

Update: 2023-06-25 18:37 IST

ಉಡುಪಿ, ಜೂ.25: ಜಿಲ್ಲೆಯ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಅದಾನಿ ಪವರ್ ಲಿಮಿಟೆಡ್, ಉಡುಪಿ ಟಿಪಿಪಿ ಸಂಸ್ಥೆಯು ‘ಗೋ-ರೆಡ್’ ಶೀರ್ಷಿಕೆಯಡಿ ರಕ್ತದಾನ ಶಿಬಿರವನ್ನು ಶನಿವಾರ ಅದಾನಿ ಫೌಂಡೇಶನ್ ವತಿಯಿಂದ ತನ್ನ ಸ್ಥಾವರದಲ್ಲಿ ಹಾಗೂ ಪಣಂಬೂರಿನ ನವ ಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ)ದಲ್ಲಿ ಆಯೋಜಿಸಿತು.

ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಅವರ ಹುಟ್ಟುಹಬ್ಬ ಪ್ರಯುಕ್ತ ಹಮ್ಮಿಕೊಳ್ಳಲಾದ ಶಿಬಿರವನ್ನು ಉಡುಪಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ಡಾ.ವೀಣಾ ಕುಮಾರಿ, ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಪಲಕ್, ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು.

ನಂತರ ಮಾತನಾಡಿದ ಡಾ.ವೀಣಾ ರಕ್ತ ಮಹತ್ವದ ಬಗ್ಗೆ ವಿವರಿಸಿದರು. ದಿನವಿಡೀ ನಡೆದ ರಕ್ತದಾನ ಶಿಬಿರದಲ್ಲಿ ಬೃಹತ್ ಸಂಖ್ಯೆಯಲ್ಲಿ ಯುಪಿಸಿಎಲ್ ಹಾಗೂ ಇತರೆ ಕಂಟ್ರಾಕ್ಟ್ ಉದ್ಯೋಗಿಗಳು ಸ್ವಇಚ್ಚೆಯಿಂದ ಭಾಗವಹಿಸಿದ್ದು, 457 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News